

ಬೆಳ್ತಂಗಡಿ.: ಬೆಳ್ತಂಗಡಿ ತಾಲೂಕಿನ ಕಿಲ್ಲೂರು ರಸ್ತೆಯ ಕೇಳ್ತಾಜೆ ಯಿಂದ ನಾವೂರು ತನಕದ 3.5 ಕಿ.ಮೀ. ರಸ್ತೆ ಮರುಡಾಮಾರೀಕರಣಕ್ಕೆ ರೂ. 1.5 ಕೋಟಿ ಅನುದಾನವನ್ನು ಮಾನ್ಯ ಶಾಸಕ ಹರೀಶ್ ಪೂಂಜರವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ ಮಾರ್ಚ್ 15 2023ರಂದು ಹಣಕಾಸು ಇಲಾಖೆಯಿಂದ ಅಧಿಕೃತವಾಗಿ ಮಂಜೂರುಗೊಳಿಸಿ ಈಗ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರದ ಸಾಧನೆಯೆಂದು ಬಿಂಬಿಸಿ ಸ್ಥಳೀಯ ಕಾಂಗ್ರೆಸಿ ಗರು ತಾಲೂಕಿನ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಿ ಪುಕ್ಕಟೆ ಪ್ರಚಾರ ತೆಗೆದುಕೊಳ್ಳುತ್ತಿರುವ ನಾವೂರು ಪರಿಸರದ ಜನತೆಗೆ ಪುಕ್ಕಟೆ ಮನರಂಜನೆ ದೊರೆತಂತಾಗಿದೆಯೆಂದು ನಿಕಟಪೂರ್ವ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ದ. ಕ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.