ಗೇರುಕಟ್ಟೆ :ಮೇ. 11 , ರಂದು ನಮ್ಮ ದೇಶಕ್ಕಾಗಿ ಪಾಕಿಸ್ಥಾನದ ವಿರುದ್ದ ಹೋರಾಟವನ್ನು ಮಾಡುತ್ತಿರುವ ಸೈನಿಕರಿಗೆ ದೈವಬಲವು ರಕ್ಷಣೆಯಾಗಿರಲೆಂದು ಪ್ರಾರ್ಥಿಸುವ ನಿಟ್ಟಿನಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪಕ್ಷದ, ಪರಿವಾರದ ವತಿಯಿಂದ ವಿಶೇಷ ಪೂಜೆ ನಡೆಯಿತು

ಈ ಪೂಜೆಯ ಸಂದರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು, ಬೂತ್ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು, ಸಿಎ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರು, ಹಾಲು ಉತ್ಪಾದಕ ಸಂಘದ ಅಧ್ಯಕ್ಷ, ನಿರ್ದೇಶಕರು, ಪಕ್ಷದ ಕಾರ್ಯಕರ್ತರು, ಪರಿವಾರದ ಜವಾಬ್ದಾರಿ ಇರುವ ಕಾರ್ಯಕರ್ತರು, ದೇಶಾಭಿಮಾನಿ ಬಂದು ಗಳು ಉಪಸ್ಥಿತರಿದ್ದರು,