ಪೆರಾಲ್ದರಕಟ್ಟೆ: ಉಗ್ರರ ವಿರುದ್ದ ಹೋರಾಡಿದ ಭಾರತೀಯ ಸೈನಿಕರಿಗೆ ಮತ್ತು ಪಹಲ್ಗಾಮ್ ದಾಳಿಯಲ್ಲಿ ಉಗ್ರರಿಂದ ಹುತಾತ್ಮಾರಾದವರಿಗೆ ಪೆರಾಲ್ದರಕಟ್ಟೆ ಜುಮಾ ಮಸೀದಿಯಲ್ಲಿ ವಕ್ಫ್ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಆದೇಶದಂತೆ ಜುಮಾ ನಮಾಜಿನ ಬಳಿಕ ವೀಶೇಷ ಪ್ರಾರ್ಥನೆಯನ್ನು ಖತೀಬರಾದ ಶಂಸುದ್ದೀನ್ ದಾರಿಮಿ ಕಕ್ಕಿಂಜೆ ಇವರ ನೇತೃತ್ವದಲ್ಲಿ ನಡೆಸಲಾಯಿತು.
ಮಸೀದಿ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಹಾಗೂ ಆಡಳಿತ ಸಮಿತಿಯ ಸದಸ್ಯರು ಜಮಾಅತರು ಉಪಸ್ಥಿತರಿದ್ದರು.