May 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಬೆನಕ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

ಉಜಿರೆ: ಅಂತರಾಷ್ಟ್ರೀಯ ದಾದಿಯರ ದಿವಸವನ್ನು ಪ್ರತಿ ವರ್ಷ ಮೇ 12 ನೇ ರಂದು ಜಗತ್ತು ಕಂಡ ಅತ್ಯುತ್ತಮ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಸ್ಮರಣರರ್ಥ ಆಚರಿಸಿ ಅವರನ್ನು ನೆನಪಿಸಿಕೊಳ್ಳುವುದು ವೈದ್ಯಕೀಯ ಕ್ಷೇತ್ರದ ಪರಂಪರೆ . ಅದೇ ರೀತಿ ಪ್ರತಿ ವರ್ಷ ಉಜಿರೆ ಬೆನಕ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಡೆದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ರವರು ದೇಶ ಕಾಯುವ ಸೈನಿಕರು ಹೇಗೆ ಕಾರ್ಯನಿರ್ವಹಿಸುತ್ತಾರೋ ಹಾಗೆಯೇ ದೇಹ ಕಾಯುವವರು ನಮ್ಮ ದಾದಿಯರು ಎಂದು ಅಭಿಪ್ರಾಯಪಟ್ಟರು ಮತ್ತು ದಾದಿಯರು ವೈದ್ಯಕೀಯ ಕ್ಷೇತ್ರದ ಆಧಾರ ಸ್ತಂಭ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

ಅತಿಥಿಯಾಗಿ ಆಗಮಿಸಿದ ಹಿರಿಯ ದಾದಿ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಪ್ರಬೋಧಕರಾಗಿ ಮತ್ತು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ವಿಶ್ರಾಂತ ಜೀವನ ಸಾಗಿಸುತ್ತಿರುವ ಶ್ರೀಮತಿ ಗುಣವತಿಯವರು ಮಾತನಾಡುತ್ತ ದಾದಿಯರ ಕೆಲಸವೆಂದರೆ ದೇವರ ಪೂಜೆ ಮಾಡಿದಂತೆ, ಅತ್ಯಂತ ಪವಿತ್ರ ವಾದ ಮತ್ತು ನಿಜವಾದ ಅರ್ಥದಲ್ಲಿ ಸೇವೆ ಎಂದು ತನ್ನ 31 ವರ್ಷಗಳ ಅನುಭವಗಳನ್ನು ಸವಿಸ್ತಾರವಾಗಿ ತಿಳಿಸಿದರು.


ದಾದಿಯರ ದಿನಾಚರಣೆಯ ಪ್ರಸ್ತುತಿ ಮತ್ತು ಮಾಹಿತಿಯನ್ನು ಹಿರಿಯ ಸಿಸ್ಟರ್ ಶ್ರೀಮತಿ ಉಷಾ ಗೌಡ ವಿವರಿಸಿದರು.
ಎಲ್ಲ ದಾದಿಯರಿಗೂ ರ‍್ಸಿಂಗ್ ಸುಪರಿಟೆಂಡೆಂಟ್ ಸಿಸ್ಟೆರ್ ವಸಂತ ಕುಮಾರಿಯವರು ಕರ್ತವ್ಯದ ಪ್ರತಿಜ್ಞಾ ವಿಧಿ ಬೋಧಿಸಿದರು.
ದಾದಿಯರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ಪರ್ಧೇ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು . ಡಾ. ಭಾರತಿ ಜಿ. ಕೆ ಧನ್ಯವಾದವಿತ್ತರು.

Related posts

ಕಕ್ಕಿಂಜೆ ಸ. ಪ್ರೌ. ಶಾಲಾ ಇಬ್ಬರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅನುಜ್ಞಾ ತೇರ್ಗಡೆ

Suddi Udaya

ಗೇರುಕಟ್ಟೆ : ಪರಪ್ಪು ಯೂನಿಟ್ ಕೆ.ಎಮ್.ಜೆ ಮತ್ತು ಎಸ್.ವೈ.ಎಸ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಬೆಳ್ತಂಗಡಿ ವಕೀಲರ ಸಂಘಕ್ಕೆ ನ್ಯಾಯಮೂರ್ತಿ ರಾಜೇಶ್‌ ರೈ ಕೈರಂಗಳ ಭೇಟಿ

Suddi Udaya
error: Content is protected !!