ಕಲ್ಮಂಜ: ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಯುವಕರ ಕೊಲೆ ಮಾಡಿ ದೇಶದ ನಿದ್ದೆಗೆಡಿಸಿದ
ಪಾಪಿ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆಯು ಕೈಗೊಂಡ ಆಪರೇಷನ್ ಸಿಂಧೂರದಲ್ಲಿ ಭಾರತಾಂಬೆಯ ರಕ್ಷಣೆಗಾಗಿ ಎದೆಯೊಡ್ಡಿ ಹೋರಾಡಿ ಪಾಪಿ ಪಾಕಿಸ್ತಾನಿ ಸರಕಾರಕ್ಕೆ ತಕ್ಕ ಶಾಸ್ತಿಯನ್ನು ಮಾಡಿದ ಆ ಮೂಲಕ ಭಯೋತ್ಪಾದನೆಯನ್ನು ಈ ನೆಲದಿಂದಲೇ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಿದ ಭಾರತೀಯ ಸೈನ್ಯಕ್ಕೆ ಇನ್ನಷ್ಟು ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂಬ ಸದಾಶಯದಿಂದ ಮೇ 12 ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ಸಿಯಾಳಭಿಷೇಕ ಮಾಡುವ ಮೂಲಕ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮರಾಠೆ, ಅರ್ಚಕರು, ಸಮಿತಿ ಸದಸ್ಯರುಗಳು ಹಾಗೂ ಊರವರು ಉಪಸ್ಥಿತರಿದ್ದರು.