ಬೆಳ್ತಂಗಡಿ: ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ದ. ಕ. ಗ್ಯಾರೇಜು ಮಾಲಕರ ಸಂಘ ಗ್ಯಾರೇಜು ಮಾಲಕರ ಸ್ಪೋರ್ಟ್ಸ್ ಕ್ಲಬ್ ಮತ್ತು ನೆಹರು ಯುವ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಮೇ. 11ರಂದು ನಡೆದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕ್ರೀಡೋತ್ಸವ 2025 ಮತ್ತು ಕುಟುಂಬ ಸಮ್ಮಿಲನದಲ್ಲಿ ಹನ್ನೊಂದು ವಲಯದಲ್ಲಿ ಬೆಳ್ತಂಗಡಿ ವಲಯ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪುರುಷರ ವಾಲಿಬಾಲ್ ನಲ್ಲಿ ಮೊದಲ ಸ್ಥಾನ, ಹಗ್ಗ ಜಗ್ಗಾಟದಲ್ಲಿ ಎರಡನೇ ಸ್ಥಾನ, ಮ್ಯೂಸಿಕಲ್ ಚೇರ್ ನಲ್ಲಿ ಮೊದಲ ಸ್ಥಾನ, 400 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಮಹಿಳೆಯರ ತ್ರೋಬಾಲ್ ನಲ್ಲಿ ಎರಡನೇ ಸ್ಥಾನ, ವೈಯಕ್ತಿಕ ಹಲವಾರು ಪ್ರಶಸ್ತಿ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ