25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳೆ (ಮೇ 16): ಕಕ್ಕಿಂಜೆಯಲ್ಲಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಶಾಖೆಯ ಉದ್ಘಾಟನಾ ಸಮಾರಂಭ

ಚಾರ್ಮಾಡಿ: ಪ್ರತಿಷ್ಠಿತ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಕಕ್ಕಿಂಜೆ ಶಾಖೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಮೇ 16 ರಂದು ಬೆಳಗ್ಗೆ 10.30ಕ್ಕೆ ಚಾರ್ಮಾಡಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ನೆರವೇರಲಿದೆ.

ಶಾಖಾ ಕಛೇರಿ ಉದ್ಘಾಟನೆಯನ್ನು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಎಸ್. ಜಯರಾಮ ಶೆಟ್ಟಿ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ವಹಿಸಲಿರುವರು.

ದೀಪ ಪ್ರಜ್ವಲನೆಯನ್ನು ಪ್ರಗತಿಪರ ಕೃಷಿಕ ಕೆ. ಅನಂತರಾಮ್ ರಾವ್ ನೆರವೇರಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದ ಎ., ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|| ಮುರುಳಿಕೃಷ್ಣ ಇರ್ವತ್ರಾಯ, ತೋಟತ್ತಾಡಿ ಸೈಂಟ್ ಅಂಥೋನಿ ಪೊರೇನ್ ಚರ್ಚ್ನ ಟ್ರಸ್ಟಿ ಶಾಜಿ ತೊಪ್ಪಿಲ್, ಕಕ್ಕಿಂಜೆ ಮೊಹಿದ್ದಿನ್ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಜಿ., ಚಾರ್ಮಾಡಿ ಶ್ರೀ ಮತ್ತೂರು ಪಂಚಲಿAಗೇಶ್ವರ ದೇವಸ್ಥಾನದ ಅಧ್ಯಕ್ಷ ಪ್ರಕಾಶ ಹೊಸಮಠ, ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ. ವಿನಯಚಂದ್ರ, ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. ಭಾಗವಹಿಸಲಿರುವರು.

ಪ್ರತಿಷ್ಠಿತ ಸೊಸೈಟಿಯಾದ ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 19 ಶಾಖೆ ಹೊಂದಿದ್ದು, 2024-25ನೇ ಸಾಲಿನ ಸಾಧನೆಯ ಪ್ರಗತಿ. ಪ್ರಸ್ತುತ ರೂ.248 ಕೋಟಿ ಠೇವಣಿ. ರೂ.216 ಕೋಟಿ ಸಾಲ ರೂ.280 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ.1104 ಕೋಟಿ ದಾಖಲೆಯ ವ್ಯವಹಾರ ನಡೆಸಿ ರೂ.3 ಕೋಟಿಕ್ಕಿಂತ ಹೆಚ್ಚು ಲಾಭದಲ್ಲಿದ್ದು, 33500ಮಿಕ್ಕಿ ಸದಸ್ಯತನ ಹೊಂದಿದೆ. ೨೦ ವರ್ಷಗಳಿಂದ ಸೊಸೈಟಿ ಎ ಶ್ರೇಣಿಯಲ್ಲಿದೆ. 2011ರಲ್ಲಿ ಕಕ್ಕಿಂಜೆ ಶಾಖೆ ಫಾತಿಮಾ ಆರ್ಕೇಡ ಕಟ್ಟಡದಲ್ಲಿ ಪ್ರಾರಂಭಗೊAಡಿದ್ದು 14 ವರ್ಷಗಳಲ್ಲಿ ಸುಮಾರು ೮ ಕೋಟಿ ಠೇವಣಿ, 18.52 ಕೋಟಿ ಸಾಲ ನೀಡಿದೆ. ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಇದೀಗ ಕಕ್ಕಿಂಜೆ ಶಾಖೆ ಚಾರ್ಮಾಡಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
-ಅಜಿತ್ ಜಿ. ಶೆಟ್ಟಿ, ಅಧ್ಯಕ್ಷರು, ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗುರುವಾಯನಕೆರೆ

Related posts

ಮುಳಿಯದಲ್ಲಿ ದೀಪಾವಳಿ ಸಂಭ್ರಮ: ವಜ್ರಾಭರಣ ಖರೀದಿಗೆ ಕಾರು ಗೆಲ್ಲುವ ಅವಕಾಶ- ಗ್ರಾಹಕರಿಗೆ ವಿಶೇಷ ಕೊಡುಗೆ

Suddi Udaya

ಜು. 13: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ “ಶ್ರೀ ಗುರುಸಾನಿಧ್ಯ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳೆಂಜ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಕೆಡವಿದ ಪ್ರಕರಣ : ಆರಂಭಗೊಂಡ ಕಂದಾಯ – ಅರಣ್ಯ ಜಂಟಿ ಸರ್ವೆ

Suddi Udaya

ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಪರಿಸರ ದಿನಾಚರಣೆ

Suddi Udaya

ಮೊಗ್ರು: ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ

Suddi Udaya

ತಾಲೂಕು ಶಾಮಿಯಾನ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

Suddi Udaya
error: Content is protected !!