24 C
ಪುತ್ತೂರು, ಬೆಳ್ತಂಗಡಿ
May 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆರಿಯಾ ಗ್ರಾಮದಲ್ಲಿ “ಮಲೆಕುಡಿಯ ಬುಡಕಟ್ಟು ಕುಟುಂಬಗಳೊಂದಿಗೆ ಶೈಕ್ಷಣಿಕ ವಿನಿಮಯ”

ಬೆಳ್ತಂಗಡಿ : ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳ ಗಂಗೋತ್ರಿ ಕೋಣಾಜೆ ಪ್ರಥಮ ವರ್ಷದ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದಲ್ಲಿ ಮೇ6 ರಿಂದ 12ರವರೆಗೆ “ಮಕ್ಕಳ ಚಿತ್ತ ‘ಮಲೆ’ನಾಡಿನ ವೈಭವದತ್ತ” ಎಂಬ ಪರಿಕಲ್ಪನೆಯೊಂದಿಗೆ
‘ಬುಡಕಟ್ಟು ಅಧ್ಯಯನ ಶಿಬಿರ’ವು ನಡೆಯಿತು.

ಒಟ್ಟು ಏಳು ದಿನಗಳಲ್ಲಿ ಮಲೆಕುಡಿ ಸಮುದಾಯದ ಬುಡಕಟ್ಟು ವಿಚಾರಗಳ ಮೂಲ ಅಧ್ಯಯನ ಮಲೆಕುಡಿಯರ ಮಲೆ ಚಾಮುಂಡೇಶ್ವರಿ ದೇವಸ್ಥಾನ ಜಾತ್ರೆ ವೀಕ್ಷಣೆ , ಸಮುದಾಯದ ಕೆಲವು ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕ, ಜಾಗೃತಿ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಮತ್ತು ಮಲೆಕುಡಿಯ ಸಮುದಾಯದವರಿಗೆ ಉಚಿತ ವೈದ್ಯಕೀಯ ತಪಾಸಣೆ ಇತ್ಯಾದಿ ಸಮುದಾಯಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ಮೇ12ರಂದು ಸಮಾರೋಪ ಪೂರ್ವದ ಗೋಷ್ಠಿಯಲ್ಲಿ ‌ಬೆಳ್ತಂಗಡಿಯ ಪತ್ರಕರ್ತ ಅಚುಶ್ರೀ ಬಾಂಗೇರು ಸಂಪನ್ಮೂಲ ವ್ಯಕ್ತಿಯಾಗಿ “ಪ್ರಸ್ತುತ ಸಮಾಜದಲ್ಲಿ ಪತ್ರಿಕೆಗಳ ಪಾತ್ರ” ಎಂಬ ವಿಷಯ ಮಂಡನೆಗೈದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಡಾ. ಪೌಲ್ ಜಿ ಅಕ್ವೀನಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಲೆಕುಡಿಯ ಸಮುದಾಯದ ಹಿರಿಯರಾದ ಮಂಜಪ್ಪ ಮಲೆಕುಡಿಯ, ಸ. ಹಿ. ಪ್ರಾ. ಶಾಲೆ ನೆರಿಯಾ ಇದರ ಎಸ್. ಡಿ.ಎಂ.ಸಿ ಅಧ್ಯಕ್ಷ ಸತೀಶ್ ಭರ್ತಾಜ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ
ಸಾಂದರ್ಭಿಕವಾಗಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ನವೀನ್ ನೆರಿಯ ಭಾರತ ಮಾತಾ ಪೂಜೆಯನ್ನು ನೆರವೇರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಮದನ್ ಕುಮಾರ್ ಕೆ., ಸಾಂಸ್ಕೃತಿಕ ಕಾರ್ಯದರ್ಶಿ ರಾಮಪ್ರಸಾದ್ ಬಿ.ಟಿ., ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶಿಬಿರದ ಸಂಯೋಜಕಿ ವಿನುತಾ ಕೆ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಆರ್ ಸೂರ್ಯ ಶಿಬಿರದ ವರದಿ ವಾಚನಗೈದರು.
ವಿದ್ಯಾರ್ಥಿ ಪ್ರತಿನಿಧಿ ಆಸಿಕಾ ಬಿ ಅತಿಥಿಗಳಿಗೆ ಸ್ಮರಣಿಕೆ ಹಸ್ತಾಂತರಿಸಿದರು.
ಮೋಕ್ಷಾ ಬಿ, ಶ್ರೇಯಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಶಿಬಿರ ನಿರ್ದೇಶಕಿ ಡಾ. ಯಶಸ್ವಿನಿ ಬಟ್ಟಂಗಾಯ ಧನ್ಯವಾದವಿತ್ತರು.

Related posts

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ವೈಭವ: ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ವಿವಿಧ ಸಮಿತಿಗಳ ಜೊತೆ ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ಹಾಗೂ ವೇಣೂರಿನಲ್ಲಿ 10ಎಂ.ವಿ.ಎ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳ ಸ್ಥಾಪಿಸುವಂತೆ ಸಚಿವರಿಗೆ ಮನವಿ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಶಿಖರ್ಜಿಯಲ್ಲಿ ನಿರಂಜನನ ದರ್ಶನ ಹಾಗೂ ಜಿನಭಕ್ತಿ ಲಹರಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ

Suddi Udaya

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ

Suddi Udaya

ಹೀರ್ಯ “ಅಕ್ಷಯ ನಿಲಯ” ಗೃಹ ಪ್ರವೇಶ, ಭಜನಾ ಸೇವೆ ಹಾಗೂ ಯಕ್ಷಗಾನ ಬಯಲಾಟ

Suddi Udaya
error: Content is protected !!