ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಸುಬ್ರಹ್ಮಣ್ಯ ಶಬರಾಯ ಅವರು ಮೂರನೇ ಬಾರಿಗೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೌತಡ್ಕ ದೇವಸ್ಥಾನದಲ್ಲಿ ಅವರು ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಮೇ 15 ರಂದು ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಸಮಿತಿಯ ಇತರೆ ಸದಸ್ಯರು ಹಾಜರಿದ್ದರು.
ಸದಸ್ಯರಾಗಿ ವಿಶ್ವನಾಥ್ ಪೂಜಾರಿ ಕೊಲ್ಲಾಜೆ , ಹರಿಶ್ಚಂದ್ರ ಜಿ , ಸಿನಿ ಗುರುದೇವ್, ಗಣೇಶ್ ಕಾಶಿ , ಪ್ರಶಾಂತ್ ಮಚ್ಚಿನ, ಪ್ರಮೋದ್ ಶೆಟ್ಟಿ , ಲೋಕೇಶ್ವರಿ ವಿನಯಚಂದ್ರ , ಸತ್ಯಪ್ರಿಯ ಕಲ್ಲೂರಾಯ (ಪ್ರಧಾನ ಅರ್ಚಕರು).