ನೈನಾಡು: ಕೀರ್ತಿ ಶೇಷ ಸುಂದರ ಪೂಜಾರಿ ಓಂ ನಿವಾಸ ಕಾಜಲ ಸ್ಮರಣಾರ್ಥ ಹಾಗೂ ನಿನ್ಯಾಲು ದಿ. ಪ್ರೇಮಾ ಚಿನ್ನಯ್ಯ ಹೆಗ್ಡೆ ಸ್ಮರಣಾರ್ಥ ಶ್ರೀ ರಾಮ ಯುವಕ ಸಂಘ, ಶ್ರೀ ರಾಮ ಭಜನಾ ಮಂದಿರ, ನಿವೇದಿತಾ ಮಾತೃ ಮಂಡಳಿ, ಶ್ರೀ ಕೊಡಮಣಿತ್ತಾಯ ಪಿಲಿಚಾಮುಂಡಿ ಪರಿವಾರ ದೈವಗಳ ಗಡಿವಾಡು ಸ್ಥಳ ನೈನಾಡು ಹಾಗೂ ವಿದ್ಯಾ ದಾನಿ ಬಂಧುಗಳ ಸಹಕಾರದೊಂದಿಗೆ ನೈನಾಡಿನ ಶ್ರೀ ರಾಮ ಸಭಾ ಭವನದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ತುಂಗಪ್ಪ ಬಂಗೇರಾ ರವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹರೀಂದ್ರ ಟಿ ಪೈ, ಶಾರದಾ ರತ್ನಾಕರ್ ಕೊಡೆಂಜಾರು, ಜಾರಪ್ಪ ಪೂಜಾರಿ, ಶ್ರೀಮತಿ ರತ್ನ ಸುಂದರ ಪೂಜಾರಿ, ಶ್ರೀ ಲಕ್ಷ್ಮೀ ನಾರಾಯಣ ಹೆಗ್ಡೆ ನಿನ್ಯಾಲು, ಪ್ರಶಾಂತ್ ನಿನ್ನಿಕಲ್ಲು, ಜಯಶೀಲಾ ಚಂದ್ರಶೇಖರ್ ಅಚ್ಚಿನಡ್ಕ, ಸಂತೋಷ್ ಪೂಜಾರಿ ಮುಜ್ಜಾಲೆ, ಶೇಖರ್ ನಿನ್ನಿಕಲ್ಲು, ರಾಘವ ಆಚಾರ್ಯ, ವಿಜಯ್ ಕುಮಾರ್, ಚಂದ್ರಹಾಸ ಅಚ್ಚಿನಡ್ಕ, ಗಣೇಶ್ ಹೆಗ್ಡೆ ಮಿತ್ತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 203 ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ ಮಾಡಲಾಯಿತು.