September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿ

ಇಳಂತಿಲ ಅಂಡೆತಡ್ಕ ಮನೆ ನಿವಾಸಿ ಅರುಣ್ ನಾಪತ್ತೆ

ಹೊಟ್ಟೆ ನೋವಿಗೆ ಔಷಧಿಗೆಂದು ಹಣವನ್ನು ಪಡೆದು ಮನೆಯಿಂದ ಹೋದವರು ನಾಪತ್ತೆ

ಇಳಂತಿಲ:: ಇಲ್ಲಿನ ಇಳಂತಿಲ ಗ್ರಾಮದ ಅಂಡೆತಡ್ಕ ಮನೆ ನಿವಾಸಿ ಅರುಣ್ ಎ. (35) ಎಂಬವರು ಮೇ ತಿಂಗಳ 1 ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ನಾಪತ್ತೆಯಾದ ಅರುಣ್ ರವರ ಸಹೋದರ ಸುನಿಲ್ ಕುಮಾ‌ರ್ ಪೊಲೀಸರಿಗೆ ದೂರು ನೀಡಿದ್ದು, ಮೂಲತಃ ಕೇರಳ ರಾಜ್ಯದ ಕಾಸರಗೋಡು ನೀರ್ಚಾಲ್‌ ಗ್ರಾಮದ ನಿವಾಸಿಯಾಗಿರುವ ಇವರುಗಳು ಇಳಂತಿಲ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಇಳಂತಿಲದಲ್ಲೇ ತಾತ್ಕಾಲಿಕ ವಾಸ್ತವ್ಯವನ್ನು ಹೊಂದಿದ್ದರು. ಮೇ 1 ರಂದು ತನಗೆ ಹೊಟ್ಟೆ ನೋವಿದೆಂದು ತಿಳಿಸಿ ಔಷಧಿಗೆಂದು ಹಣವನ್ನು ಪಡೆದು ಮನೆಯಿಂದ ಹೋದವರು ಹಿಂದಿರುಗಿ ಬಂದಿಲ್ಲ. ಈ ಕುರಿತು ಅವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಹಬ್ಬ ಆಚರಣೆ

Suddi Udaya

ಮೊಗ್ರು ಸರಕಾರಿ ಶಾಲೆಗೆ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ನಿಂದ ರೂ. 7.25 ಲಕ್ಷ ದೇಣಿಗೆ ವಿನಿಯೋಗ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಎಸ್.ಡಿ.ಎಂ ಕಾಲೇಜು : ವಿದ್ಯಾರ್ಥಿ ತಯಾರಿಕೆಯ 30ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

Suddi Udaya

ಅರಸಿನಮಕ್ಕಿ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ವರದ ಶಂಕರ ದಾಮ್ಲೆ, ಉಪಾಧ್ಯಕ್ಷರಾಗಿ ಸೀತಾ ಎ ಆಯ್ಕೆ

Suddi Udaya

ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ- ಕಲ್ಲೇರಿ ಶಾಖೆಯ ಸ್ವ-ಸಹಾಯ ಸಂಘಗಳ ಉದ್ಘಾಟನೆ

Suddi Udaya
error: Content is protected !!