ಕಕ್ಯಪದವು : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪ್ರಾರ್ಥನಾ ಎಚ್.ಕೆ 625 ರಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿ ಅಮೋಘ ಸಾಧನೆ ಗೈದಿದ್ದಾರೆ. ಬಂಟ್ಯಾಳ ತಾಲ್ಲೂಕಿಗೆ ಪ್ರಥಮ ರ‍್ಯಾಂಕ್ ಗಳಿಸಿದ ಇವರು ಹಾಗೂ ಶಾಲೆಗೆ ಪ್ರಥಮ ಸ್ಥಾನದಿಂದ ತೇರ್ಗೆಡೆ ಹೊಂದಿದ್ದಾರೆ. ಇವರು ಉಳಿ ಗ್ರಾಮದ ಕೇರಿಯಾ ನಿವಾಸಿ ಕಕ್ಯಪದವಿನ ಉದ್ಯಮಿಯಾದ ಹರಿಶ್ಚಂದ್ರ ಮತ್ತು ಕುಶಲ ದಂಪತಿಯ ಪುತ್ರಿ.
ಪ್ರಾರ್ಥನಾ ಈ ಹಿಂದೆ ಹಿಂದಿ ಮತ್ತು ವಿಜ್ಞಾನ ವಿಷಯದಲ್ಲಿ 99 ಅಂಕ ಗಳಿಸಿದ್ದರು. ಆದರೆ ಮರು ಮೌಲ್ಯ ಮಾಪನದಲ್ಲಿ ಎರಡೂ ವಿಷಯದಲ್ಲಿ ಒಂದೊಂದು ಹೆಚ್ಚು ಗಳಿಸಿ ತಲಾ 100 ಅಂಕಗಳೊಂದಿಗೆ ಒಟ್ಟು ಅಂಕಗಳನ್ನು 624ಕ್ಕೆ ಏರಿಸಿ ಈ ಸಾಧನೆ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಎಲ್‌ಸಿಆರ್ ಇಂಡಿಯನ್ ವಿದ್ಯಾಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಸಹಿತ ಇನ್ನಿತರ ಕಾರ್ಯ ಚಟುವಟಿಕೆಯಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕಿನಲ್ಲಿ ಸಾಧನೆಗೈದು ಹೆಸರುವಾಸಿಯಾಗಿದೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಇಳಂತಿಲ, ತಣ್ಣೀರುಪಂತ, ಮಡಂತ್ಯಾರು, ಉರುವಾಲು, ಬಾರ್ಯ, ಮಚ್ಚಿನ ಗ್ರಾಮಗಳ ಹಾಗೂ ನೆರೆಯ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮದ ವಿದ್ಯಾರ್ಥಿಗಳ ವಿದ್ಯಾಕೇಂದ್ರವಾಗಿದೆ ಎಲ್ ಸಿಆರ್ ಇಂಡಿಯನ್ ವಿದ್ಯಾಸಂಸ್ಥೆ. ದಶಮಾನೋತ್ಸವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದ್ದ ಸಂಸ್ಥೆ ಇದೀಗ ರಾಜ್ಯವೇ ಗುರುತಿಸುವಂತಹ ಸಾಧನೆ ಮಾಡಿದ್ದು ಸಂಸ್ಥೆಯ ಸಾಧನೆಗಳ ಶಿಖರಕ್ಕೆ ಮತ್ತೊಂದು ಮೈಲ್ಲುಗಲ್ಲು ಸೇರ್ಪಡೆಯಾಗಿದೆ.