September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರಾಯ ಶ್ರೀ ಕೃಷ್ಣ ಭಜನಾಮಂದಿರದಲ್ಲಿ ಕುಣಿತ ಭಜನಾ ತರಬೇತಿ

ಕರಾಯ ಶ್ರೀ ಕೃಷ್ಣ ಭಜನಾ ಮಂದಿರ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಣ್ಣೀರುಪಂತ ವಲಯ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಭಜನಾಮಂದಿರ ಕರಾಯ ಇಲ್ಲಿ ಮಕ್ಕಳಿಗೆ ಒಂದು ವಾರದ ಕುಣಿತ ಭಜನಾ ತರಬೇತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯದ ಆಡಳಿತ ಮೊಕ್ತೇಸರರಾದ ಅನಂತಕೃಷ್ಣ ಕುದ್ದನಾಯ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಉದ್ಘಾಟಿಸಿ,
ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾದ ನಿವೃತ ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್ ಕೊಲ್ಲಿ ಮಾತಾನಾಡಿ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಭಜನೆ ನಡೆಯುತ್ತ ಇತ್ತು ಆದ್ರೆ ಇಂದಿನ ಕಾಲದಲ್ಲಿ ಭಜನೆ ಮಾಡುವ ಮನೆಗಳು ಸಿಗುವುದು ಬಹಳ ವಿರಳ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಯದ ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ ಶೆಟ್ಟಿ ಮೈರ ಮಾತಾಡಿ ಭಜನೆ ಮಾಡಿದಲ್ಲಿ ವಿಭಜನೆ ಇಲ್ಲ ಎಂಬ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಅಶೋಕ್ ಹಿರಿಯರಾದ ಗೋಪಾಲಕೃಷ್ಣ ಪೈ, ಭಜನಾಪರಿಷತ್ ನ ಸಮನ್ವಯಧಿಕಾರಿ ಸಂತೋಷ್ ಪಿ. ಅಳಿಯೂರು ಭಜನಾ ತರಬೇತುದಾರರಾದ ಆಕಾಶ್ ಹಾಗೂ ಭಜನಾಪರಿಷತ್ ಪದಾಧಿಕಾರಿಗಳು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ಯುವರಾಜ್ ನಿರೂಪಿಸಿದರು. ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ ಸ್ವಾಗತಿಸಿ, ತಣ್ಣೀರುಪಂತ ವಲಯದ ವಲಯ ಅಧ್ಯಕ್ಷ ರಾಜಶೇಖರ್ ರೈ ವಂದಿಸಿದರು.

Related posts

ಪುದುವೆಟ್ಟು: ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣೆ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನೈಋತ್ಯ ರೈಲ್ವೆಯ ಡಿಆರ್‌ಯುಸಿಸಿ ಸದಸ್ಯರಾಗಿ ಬಂಗಾಡಿಯ ರಾಜೇಶ್ ಪುದುಶೇರಿ ನೇಮಕ

Suddi Udaya

ನೇತ್ರಾವತಿ ನದಿ ತಟದಿಂದ ಧರ್ಮಸ್ಥಳ ಅಣ್ಣಪ್ಪ ಸನ್ನಿಧಾನದವರೆಗೆ ಪಾದಯಾತ್ರೆ ಕು.ಸೌಜನ್ಯ ತಾಯಿ ಕುಸುಮಾವತಿ ಭಾಗಿ

Suddi Udaya

ಪಟ್ರಮೆ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಸಂಭ್ರಮ

Suddi Udaya

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

Suddi Udaya
error: Content is protected !!