ಅರಸಿನಮಕ್ಕಿ: ಇಲ್ಲಿನ ಪಲಸ್ತಡ್ಕದ ನಿವಾಸಿಗಳಾದ ಕೃಷಿ ಕೂಲಿ ಕಾರ್ಮಿಕ ದಂಪತಿ ಸುಂದರಿ- ಸುಕುಮಾರ್ ಶೆಟ್ಟಿಯವರ ಪುತ್ರ ವಿಜೇತ್ ಅರಸಿನಮಕ್ಕಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿ ಎಸ್ಸೆ ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 612 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರ ಮನೆಗೆ ಅರಸಿನಮಕ್ಕಿಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಶನಿವಾರ ತೆರಳಿ ಅಭಿನಂದಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಯಾದ ವಿಜೇತ್ ಸಿದ್ಧಿ ವಿನಾಯಕ ಭಜನಾ ತಂಡ ಹೊಸ್ತೋಟದ ಸದಸ್ಯ, ಅರೆಸ್ಸೆಸ್ ನ ಮುಖ್ಯ ಶಿಕ್ಷ ಕ್ ಕೂಡ ಆಗಿದ್ದಾನೆ. ಈತನಿಗೆ ಗುರುವಾಯನಕೆರೆಯ ಎಕ್ಸೆ ಲ್ ಕಾಲೇಜಿನಲ್ಲಿ ಪಿಯುಸಿಗೆ ಉಚಿತವಾಗಿ ಪ್ರವೇಶಾತಿ ದೊರಕಿರುತ್ತದೆ.
ಸನ್ಮಾನ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾ. ಪಂ. ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ. ಎಸ್., ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಪ್ರೌಢಶಾಲೆಯ ಎಸ್ ಡಿ. ಎಂ. ಸಿ. ಅಧ್ಯಕ್ಷ ಗಣೇಶ್ ಪಲಸ್ತಡ್ಕ, ವೃಷಾಂಕ್ ಖಾಡಿಲ್ಕರ್, ಶ್ರೀಕಾಂತ್ ಕೆ., ಅಭಿನಯ ಭಟ್ ಮೊದಲಾದವರಿದ್ದರು.