ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬರುವ ಜೂ. 26, 27, 28, 29 ರಂದು ಕೂರತ್ ನಲ್ಲಿ ನಡೆಯಲಿರುವ ಖುರ್ರತು ಸ್ಸಾದಾತ್ ಕೂರತ್ ತಂಙಳ್ ರವರ ಪ್ರಥಮ ಉರೂಸ್ ಕಾರ್ಯಕ್ರಮದ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಖತೀಬರಾದ ಎಫ್.ಎಚ್.ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಚಾಲನೆ ನೀಡಿ ಮಾತನಾಡಿದರು.
ಅದ್ಯಕ್ಷ ಅಬೂಬಕ್ಕರ್ ಹಾಜಿ, ಕೂರತ್ ತಂಙಳ್ ಉರೂಸ್ ಪ್ರಚಾರ ಸಮಿತಿಯ ಚೀಫ್ ಕನ್ವೀನರ್ ಅಬ್ದುಲ್ ಕರೀಮ್ ಗೇರುಕಟ್ಟೆ, ಆಡಳಿತ ಸಮಿತಿಯ ಸದಸ್ಯರು ಮತ್ತು ಕೆ ಎಮ್ ಜೆ,ಎಸ್ ವೈ ಎಸ್, ಸ್ವಲಾತ್ ಸಮಿತಿ, ಎಸ್ ಎಸ್ ಎಫ್ ಹಾಗೂ ಜಮಾಅತರು ಹಾಜರಿದ್ದರು.