ಕಾರ್ಕಳ: ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್)೨೦೨೫ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮೋಹಿತ್-೯೯.೪೦೯೩೩೫೯ ಪರ್ಸೆಂಟೈಲ್ ನೊಂದಿಗೆ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ ಕೆಟಗರಿ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ (ಂIಖ ೧೦೧), ಟಿ ಪ್ರದೀಪ್ (ಂIಖ ೧೧೭),ಮೋನಿಕಾ ಕೆ ಎ(ಂIಖ ೧೪೦), ಸುಧಾಂಶು ಪಾಲೇಕರ್ (ಂIಖ ೨೬೮), ಪ್ರತಿಕ್ ಎನ್ ಶೆಟ್ಟಿ (ಂIಖ ೩೬೨), ತ್ರಿಶ್ಲಾ ಗಾಂಧಿ (ಂIಖ ೪೨೩), ರೋಹಿತ್ ಜಿ ಬಿ -(ಂIಖ ೪೬೧), ಸಾಚಿ ಶಿವಕುಮಾರ್ -(ಂIಖ ೪೮೪), ಚಿನ್ಮಯಿ ಆರ್-(ಂIಖ ೫೧೯), ಮನೋಜ್ ಎಂ ಆರ್ -(ಂIಖ ೮೪೬), ಚೇತನ್ ಗೌಡ -(ಂIಖ ೮೬೭), ಆಕಾಶ್ ದೇವಾಡಿಗ -(ಂIಖ ೯೮೦) ಕೆಟಗರಿ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ೫೦೦ ರ‍್ಯಾಂಕ್ ಒಳಗೆ ೧೦ ಮಂದಿ, ೧೦೦೦ ರಾಂಕ್ ಒಳಗೆ ೧೪ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ರಾಷ್ಟçದ ಪ್ರತಿಷ್ಠಿತ ಸಂಸ್ಥೆಗಳಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ರಾಷ್ಟçದ ಅತ್ಯುನ್ನತ ಸಂಸ್ಥೆಯಾದ ಐ.ಐ.ಟಿ. ಹಾಗೂ ಇನ್ನಿತರ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಬಿ. ಆರ್ಕ್ ಕೋರ್ಸಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಗೆ ಕ್ರಿಯೇಟಿವ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಜೆ.ಇ.ಇ. ಬಿ. ಆರ್ಕ್ ಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ.ಎಸ್, ಶರತ್ ರವರು ಅಭಿನಂದನೆ ಸಲ್ಲಿಸಿದ್ದಾರೆ.