ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆ.ಇ.ಇ.(ಬಿ.ಆರ್ಕ್) ಫಲಿತಾಂಶ ಪ್ರಕಟ: ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ: ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್)೨೦೨೫ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮೋಹಿತ್-೯೯.೪೦೯೩೩೫೯ ಪರ್ಸೆಂಟೈಲ್ ನೊಂದಿಗೆ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ ಕೆಟಗರಿ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ.


ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ (ಂIಖ ೧೦೧), ಟಿ ಪ್ರದೀಪ್ (ಂIಖ ೧೧೭),ಮೋನಿಕಾ ಕೆ ಎ(ಂIಖ ೧೪೦), ಸುಧಾಂಶು ಪಾಲೇಕರ್ (ಂIಖ ೨೬೮), ಪ್ರತಿಕ್ ಎನ್ ಶೆಟ್ಟಿ (ಂIಖ ೩೬೨), ತ್ರಿಶ್ಲಾ ಗಾಂಧಿ (ಂIಖ ೪೨೩), ರೋಹಿತ್ ಜಿ ಬಿ -(ಂIಖ ೪೬೧), ಸಾಚಿ ಶಿವಕುಮಾರ್ -(ಂIಖ ೪೮೪), ಚಿನ್ಮಯಿ ಆರ್-(ಂIಖ ೫೧೯), ಮನೋಜ್ ಎಂ ಆರ್ -(ಂIಖ ೮೪೬), ಚೇತನ್ ಗೌಡ -(ಂIಖ ೮೬೭), ಆಕಾಶ್ ದೇವಾಡಿಗ -(ಂIಖ ೯೮೦) ಕೆಟಗರಿ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ೫೦೦ ರ‍್ಯಾಂಕ್ ಒಳಗೆ ೧೦ ಮಂದಿ, ೧೦೦೦ ರಾಂಕ್ ಒಳಗೆ ೧೪ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ರಾಷ್ಟçದ ಪ್ರತಿಷ್ಠಿತ ಸಂಸ್ಥೆಗಳಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.


ರಾಷ್ಟçದ ಅತ್ಯುನ್ನತ ಸಂಸ್ಥೆಯಾದ ಐ.ಐ.ಟಿ. ಹಾಗೂ ಇನ್ನಿತರ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಬಿ. ಆರ್ಕ್ ಕೋರ್ಸಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಗೆ ಕ್ರಿಯೇಟಿವ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.


ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಜೆ.ಇ.ಇ. ಬಿ. ಆರ್ಕ್ ಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ.ಎಸ್, ಶರತ್ ರವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಮನ್ ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ನೂತನ ಪ್ರಾಂಶುಪಾಲರಾಗಿ ಝೀನತ್ ಬಾನು ಅಧಿಕಾರ ಸ್ವೀಕಾರ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಕಾಜೂರ್ ಸರ್ಕಲ್ : ಪ್ರಜಾಭಾರತ ಸಂಗಮ

Suddi Udaya

ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನ ಪರೀಕ್ಷೆ: ಹೊಕ್ಕಾಡಿಗೋಳಿ ಸ.ಉ.ಪ್ರಾ ಶಾಲೆಯ ವಿದ್ಯಾರ್ಥಿ ರೈಶಾ ಸುಹಾನ ರಿಗೆ ಉತ್ತಮ ಅಂಕ

Suddi Udaya

ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷರಾಗಿ ವಿಮಲ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ರಾವ್ ಆಯ್ಕೆ

Suddi Udaya

ವಾಣಿ ಕಾಲೇಜು: ಎನ್‌ಎಸ್‌ಎಸ್ ನಲ್ಲಿ ತೇಜಸ್ ಅವರಿಗೆ ಬೆಸ್ಟ್ ಪರ್ಫಾರ್ಮರ್ ಅವಾರ್ಡ್

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆಟಿದ ಕಮ್ಮೆನ

Suddi Udaya
error: Content is protected !!