September 6, 2026
Uncategorized

ಗುರುವಾಯನಕೆರೆ ಶಿವಂ ಟೆಕ್ಸ್ ಟೈಲ್ಸ್ ಮಾಲೀಕ ಶರ್ವಣ್ ಹೃದಯಾಘಾತದಿಂದ ನಿಧನ

ಗುರುವಾಯನಕೆರೆ: ಶಿವಂ ಟೆಕ್ಸ್‌ಟೈಲ್ ಮಾಲೀಕ ಶರ್ವಣ್ (32ವ) ಮೇ.26ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ರಾಜಸ್ಥಾನದವರಾಗಿದ್ದ ಶರ್ವಣ್ ಅವರು ಗುರುವಾಯನಕೆರೆಯ ಹವ್ಯಕ ಭವನದ ಹತ್ತಿರ ಬಾಡಿಗೆಗಿದ್ದ ಮನೆಯಲ್ಲಿ ತಲೆ ತಿರುಗುತ್ತಿದೆ ಎಂದು ಹೇಳಿ ಮಲಗಿದವರು ಎದ್ದೇಳದೆ ಇದ್ದಾಗ ಗಾಬರಿಗೊಂಡ ಮನೆಯವರು ಶರ್ವಣರನ್ನು ತಕ್ಷಣ ಅಭಯ ಆಸ್ಪತ್ರೆಗೆ ದಾಖಲು ಮಾಡಿದರು.

ಪರಿಶೀಲಿಸಿದ ವೈದ್ಯರು ಶರ್ವಣ್ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ಇದೀಗ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಸ್ಟ್ ಮಾರ್ಟಂ ನಂತರ ಶರ್ವಣ್ ರ ಮೃತಶರೀರವನ್ನು ಅವರ ಊರಾದ ರಾಜಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಮನೆ ಮಂದಿ ತಿಳಿಸಿದ್ದಾರೆ.

ಶರ್ವಣ್ ಅವರಿಗೆ ನವೆಂಬರ್‌ನಲ್ಲಿ ಮದುವೆ ಗೊತ್ತು ಮಾಡಲಾಗಿತ್ತು. ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನದ ಬೀದಿ ನಾಟಕ

Suddi Udaya

ಕಟ್ಟೆ: ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆ

Suddi Udaya

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ ಅನುಷ್ಠಾನಕ್ಕೆ ಪೂಣ೯ ಸಹಕಾರ: ಡಾ. ಹೆಗ್ಗಡೆ

Suddi Udaya

ತೆಕ್ಕಾರು ಬಟ್ರೆಬೈಲು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿಯ ಪ್ರಧಾನ ಅಂಗವಾದ ಷಢಾಧಾರ ಪ್ರತಿಷ್ಠೆ, ಗಭ೯ನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಾಂತೀಯ ಪಾಲನಾ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಕಾರ್ಯ ನಿರ್ವಹಿಸಿರುವ ನಾಳದ ಶಿಲ್ಪಿ ಜಯಚಂದ್ರ ಆಚಾರ್ಯರವರಿಗೆ ಬೆಳ್ತಂಗಡಿ ಗುರು ಸೇವಾ ಪರಿಷತ್ ಘಟಕದಿಂದ ಗೌರವಾರ್ಪಣೆ

Suddi Udaya
error: Content is protected !!