23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವೂರು: ಮುರ ಮದರಸದಲ್ಲಿ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರ

ನಾವೂರು: ಒಳಿತಿನಲ್ಲಿ ಒಟ್ಟು ಸೇರೋಣ ಮಾದಕ ದ್ರವ್ಯವನ್ನು ಸೋಲಿಸೋಣ ಎಸ್.ಜೆ ಎಮ್ ಮುರ ರೇಂಜ್ ಇದರ ಕೇಂದ್ರ ಮದ್ರಸವಾದ ನೂರುಲ್ ಹುದಾ ಮದರಸ ಮುರ ಎಸ್.ಬಿ.ಎಸ್ ವತಿಯಿಂದ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರವು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ನಿರ್ದೇಶನಂತೆ ಮೇ 25 ಮುರ ಮದರಸ ಹಾಲಿನಲ್ಲಿ ನಡೆಯಿತು.


ಇಸ್ತಿರಾಹ ಎಂಬ ಕಾರ್ಯಕ್ರಮಕ್ಕೆ ಸ್ಥಳೀಯ ಖತೀಬರಾದ ಬಹು: ಬಶೀರ್ ಸಅದಿ ಮುರ ಚಾಲನೆ ನೀಡಿದರು. ಎಸ್.ಬಿ.ಎಸ್ ಉಪಾಧ್ಯಕ್ಷ ಮುಹಮ್ಮದ್ ಜಹ್ ಫರ್ ರವರ ಖಿರಾಅತ್ ಪಾರಾಯಣದೂಂದಿಗೆ ಸದರ್ ಉಸ್ತಾದರಾದ ಅಬ್ದುಲ್ ಹಮೀದ್ ಝಹ್ರಿ ಪವಿತ್ರವಾದ ಅಲ್ಲಾಹನ ನಾಮದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ ಅಧ್ಯಾಪಕರಾದ ಖಾಲಿದ್ ಮದನಿ ಲಹರಿಯ ದುಷ್ಪರಿಣಾಮದ ಕುರಿತು ತರಗತಿ ನಡೆಸಿದರು. ನಿರಿಂದಿ ಮದರಸ ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಯವರು ಆದರ್ಶ ಸಮ್ಮೇಳನ ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಬೋಧಿಸಿದರು. ಎಸ್ .ಬಿ.ಎಸ್.ಕಾರ್ಯದರ್ಶಿ ಮುಬಶ್ಶಿರ್ ಶಾಃ ಕಮಾಲ್ ಮಾದಕ ದ್ರವ್ಯ ದ ಕುರಿತು ಭಾಷಣ ಮಾಡಿದರು. ಎತ್ತರಕ್ಕೆ ಹಾರೋಣ ಎಂಬ ಕಾರ್ಯಕ್ರಮಕ್ಕೆ ಸಹ ಅದ್ಯಾಪಕರಾದ ಅಮೀರ್ ಸಅದಿ ಯವರು ನೇತೃತ್ವ ನೀಡಿದರು. ನಂತರ ಕ್ರಾಂತಿ ಗೀತೆಯು ಎಸ್ ಯಸ್.ಬಿ.ಎಸ್ ಅಧ್ಯಕ್ಷ ಮುಹಮ್ಮದ್ ಫೈಝಲ್ ರವರ ನೇತೃತ್ವದಲ್ಲಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಬಶೀರ್ ಸ‌ಅದಿ ಆತ್ಮೀಯ ಮಜ್ಲಿಸ್, ಬುರ್ದಾ ಖುರ್ ಆನ್ ಪಾರಾಯಣ, ಸ್ವಲಾತ್, ದಿಕ್ರ್ ಹಾಗೂ ದುಆ ಮಜ್ಲಿಸ್ ಗೆ ನೇತೃತ್ವ ವಹಿಸಿದರು. .ಎಸ್.ಬಿ.ಎಸ್. ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸ್ವಾಗತಿಸಿ ಜೊ. ಕಾರ್ಯದರ್ಶಿ ಮುಹಮ್ಮದ್ ಶೈಮ್ ಧನ್ಯವಾದ ಸಲ್ಲಿಸಿದರು. ಮುರ ಮದ್ರಸದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಇದರ ಅಧೀನದಲ್ಲಿರುವ ಅಲ್ -ಖಿಲ್ರಿಯಾ ನಿರಿಂದಿ ಮದ್ರಸದ ಎಲ್ಲಾ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಸ್.ಬಿ.ಎಸ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಪಹಾರ ನೀಡಲಾಯಿತು. ಎಮ್ ಜೆ ಎಮ್ ಮುರ ನಾವೂರು ಆಡಳಿತ ಸಮಿತಿಯ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು.

Related posts

ಎಸ್. ಡಿ. ಎಂ. (ಸ್ವಾಯತ್ತ) ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಸದ್ಭಾವನಾ ದಿವಸ್ ಆಚರಣೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya

ಪ್ರಕೃತಿಯ ವಿಸ್ಮಯ: ತೊತಪುರಿ ಮಾವಿನ ಕಾಯಿಯಂತೆ ಕಂಡು ಬಂದ ಪಪ್ಪಾಯಿ ಹಣ್ಣು

Suddi Udaya

ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ, ದುರ್ಗಾಪೂಜೆ

Suddi Udaya

ಕೆಂಪೇಗೌಡ ಜಯಂತ್ಯುತ್ಸವ ಚಿತ್ರಕಲಾ ಸ್ಪರ್ಧೆ: ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ತನುಷ್ ಪ್ರಥಮ ಸ್ಥಾನ: ಅಭಿನಂದನೆ

Suddi Udaya

ಶ್ರೀಮತಿ ಮಾಲಿನಿ ಮತ್ತು ರಮಾನಂದ ಗುಡ್ಡಾಜೆ ಇವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ

Suddi Udaya
error: Content is protected !!