24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸಿಇಟಿ ಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಅಮೋಘ ಸಾಧನೆ, ಜೆಇಇ, ಎನ್ ಡಿ ಎ, ನಾಟಾ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆ

ಗುರುವಾಯನಕೆರೆ: ಇಂಜಿನಿಯರಿಂಗ್ , ನ್ಯಾಚುರೋಪತಿ, ಫಾರ್ಮಸಿ, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ – ಸಿಇಟಿ ಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಪ್ರವಣ್ ಪೊನ್ನಪ್ಪ – 18, ಯಶವಂತ್ ಕೆಪಿ – 58, ನಿಶಾನ್ ಜೈನ್- 160,ಕೃಪಾ ಸಾಂಚಿ ಮೌರ್ಯ – 436, ಅನುಷ್ ಬಿ – 482,ಸಫ್ವಾನ್ -572 , ಅನುಜ್ ಕೆ ಎಸ್ – 596, ಪ್ರತೀಕ್ಷಾ ಎಸ್ – 616,ಶಾಂತವ್ವ ಬಸಪ್ಪ ಸಾಣಕ್ಕಿ -713,ಏರಲ್ ಸಾನಿಯಾ ಡಯಾಸ್ – 751,ಸಂದೀಪ್ ದುಲಾಜ್ -727, ಪ್ರಿಮಲ್ ವಿನಿಷಾ ಡಿಸೋಜ 763, ಆನಂದ ರೆಡ್ಡಿ -883, ಧನ್ಯ ಎಸ್ – 904 ಅತ್ಯುತ್ತಮ ರಾಂಕ್ ಗಳನ್ನು ರಾಜ್ಯ ಮಟ್ಟದಲ್ಲಿ ಪಡೆದುಕೊಂಡಿದ್ದಾರೆ.

1000 ದ ಒಳಗೆ 28 ವಿದ್ಯಾರ್ಥಿಗಳು, 2000 ದ ಒಳಗೆ 36 ವಿದ್ಯಾರ್ಥಿಗಳು 5000 ದ ಒಳಗೆ 312 ವಿದ್ಯಾರ್ಥಿಗಳು ರ್‍ಯಾಂಕ್ ಗಳಿಸಿಕೊಂಡಿದ್ದಾರೆ.

ಬೋರ್ಡ್ ಎಕ್ಸಾಂನಲ್ಲಿ ಅಭೂತ ಪೂರ್ವ ಫಲಿತಾಂಶವನ್ನು ದಾಖಲಿಸುತ್ತಾ ಬಂದ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಜೆ ಇ ಇ, ಎನ್ ಡಿ ಎ, ನಾಟಾ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಳೆದ ಶೈಕ್ಷಣಿಕ ವರ್ಷದ, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ – ನೀಟ್ ನಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜು , ನಾಲ್ಕು ವಿದ್ಯಾರ್ಥಿಗಳನ್ನು ವೈದ್ಯಕೀಯ ಜಗತ್ತಿನ ಅತ್ಯುನ್ನತ ಸಂಸ್ಥೆಗಳಾದ ಏಮ್ಸ್ ಗೆ ಪ್ರವೇಶ ಕಲ್ಪಿಸಿ ಕೊಟ್ಟಿರುವುದನ್ನು ಸ್ಮರಿಸಿ ಕೊಳ್ಳಬಹುದು.

ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ತಾಲೂಕು ಆಡಳಿತ ಸೌಧದಲ್ಲಿ ಮಹಾ ಯೋಗಿ ವೇಮನ ಜಯಂತಿ ಆಚರಣೆ

Suddi Udaya

ಸೌಜನ್ಯ ಕೊಲೆ ಪ್ರಕರಣ: ಆ.27 ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳ ಶಾಸಕರುಗಳು ಭಾಗಿ:

Suddi Udaya

ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಆಟಿ ಕೂಟ – ಮೆರಗು ತಂದ ಆಟಿ ಕಳೆಂಜ : ರಂಗೇರಿಸಿದ ಮಹಿಳೆಯರ ಕೋರಿದ ಕಟ್ಟ ಡ್ಯಾನ್ಸ್

Suddi Udaya

ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ವಲಯದಿಂದ ಉಂಬುಜೆ ಕೊರಗಪ್ಪರವರ ಶಿಥಿಲಗೊಂಡ ಮನೆಯ ಛಾವಣಿಯ ತೆರವು ಕಾರ್ಯಾಚರಣೆ

Suddi Udaya

ಗುಂಡೂರಿ ದ.ಕ.ಜಿ.ಪಂ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಕಿಟ್ ವಿತರಣೆ

Suddi Udaya
error: Content is protected !!