ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ವೊಂದರ ಗೇರ್ ಜಾಮ್ ಆಗಿ ಹಿಂದಕ್ಕೂ ಚಲಾಯಿಸದೆ ರಸ್ತೆಗೆ ಅಡ್ದವಾಗಿ ನಿಂತಿದ್ದ ಬಸ್‌ವೊಂದನ್ನು ಜಡಿಮಳೆಗೆ ಪುರುಷರು ದುಡಿದ ಘಟನೆ ಮೇ 26 ರಂದು ಗುರುವಾಯನಕೆರೆ ಸಮೀಪದ ವರಕಬೆಯಲ್ಲಿ ನಡೆದಿದೆ.

ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಸಾರಿಗೆ ಬಸ್‌ನ ಗೇರ್ ಜಾಮ್ ಆಗಿತ್ತು ಚಾಲಕ ಬಸ್‌ನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದಾಗ ರಿವರ‍್ಸ್ ಗೇರ್ ಬೀಳಾದೆ ಇದ್ದ ಪರಿಣಾಮ ಕೆಲ ಕಾಲ ಪರದಾಡಿ ಪ್ರಯಾಣಿಕರು ಬೇರೆ ಬಸ್ ಹತ್ತಿದರು. ಮಾರ್ಗದಲ್ಲಿ ಹೋಗುತ್ತಿದ್ದ ಸವಾರರು ಜಡಿಮಳೆಯನ್ನು ಲೆಕ್ಕಿಸದೆ ಬಸ್‌ನ್ನು ಹಿಂದಕ್ಕೆ ತಳ್ಳಿ ಬಸ್ ಹೊಯಿತು. ರಾಜ್ಯ ಸರಕಾರ ಶಕ್ತಿಯೋಜನೆ ನೀಡಿದರೂ ಸಾರಿಗೆ ಬಸ್‌ಗಳ ಪರಿಸ್ಥಿತಿ ಶೋಚನಿಯವಾಗಿದೆ. ಸಮಸ್ಯೆಗಳ ನಡುವೆ ಬಸ್‌ನ್ನು ಓಡಿಸುವ ಜವಾಬ್ದಾರಿ ಚಾಲಕ ಮತ್ತು ನಿರ್ವಾಹಕರ ಮೇಲಿದೆ. ಕಳೆದ ವರ್ಷದಲ್ಲಿ ಹಲವು ಸಮಸ್ಯೆಗಳಿಂದ ಬಸ್‌ಗಳು ರಸ್ತೆ ಮಧ್ಯೆ ಬಾಕಿಯಾಗಿ ಉಳಿದ ಘಟನೆಗಳು ನಡೆದಿದೆ.