23.3 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಗುರುವಾಯನಕೆರೆ ಶಿವಂ ಟೆಕ್ಸ್ ಟೈಲ್ಸ್ ಮಾಲೀಕ ಶರ್ವಣ್ ಹೃದಯಾಘಾತದಿಂದ ನಿಧನ

ಗುರುವಾಯನಕೆರೆ: ಶಿವಂ ಟೆಕ್ಸ್‌ಟೈಲ್ ಮಾಲೀಕ ಶರ್ವಣ್ (32ವ) ಮೇ.26ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ರಾಜಸ್ಥಾನದವರಾಗಿದ್ದ ಶರ್ವಣ್ ಅವರು ಗುರುವಾಯನಕೆರೆಯ ಹವ್ಯಕ ಭವನದ ಹತ್ತಿರ ಬಾಡಿಗೆಗಿದ್ದ ಮನೆಯಲ್ಲಿ ತಲೆ ತಿರುಗುತ್ತಿದೆ ಎಂದು ಹೇಳಿ ಮಲಗಿದವರು ಎದ್ದೇಳದೆ ಇದ್ದಾಗ ಗಾಬರಿಗೊಂಡ ಮನೆಯವರು ಶರ್ವಣರನ್ನು ತಕ್ಷಣ ಅಭಯ ಆಸ್ಪತ್ರೆಗೆ ದಾಖಲು ಮಾಡಿದರು.

ಪರಿಶೀಲಿಸಿದ ವೈದ್ಯರು ಶರ್ವಣ್ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ಇದೀಗ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಸ್ಟ್ ಮಾರ್ಟಂ ನಂತರ ಶರ್ವಣ್ ರ ಮೃತಶರೀರವನ್ನು ಅವರ ಊರಾದ ರಾಜಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಮನೆ ಮಂದಿ ತಿಳಿಸಿದ್ದಾರೆ.

ಶರ್ವಣ್ ಅವರಿಗೆ ನವೆಂಬರ್‌ನಲ್ಲಿ ಮದುವೆ ಗೊತ್ತು ಮಾಡಲಾಗಿತ್ತು. ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ, ಶ್ರೀ ನಾಗಂಬಿಕಾ ದೇವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ
ಎಕ್ಸ್‌ಪೀರಿಯ-2ಕೆ22 ರಾಜ್ಯ ಮಟ್ಟದ ವಿಜ್ಞಾನ ಮೇಳ ಉದ್ಘಾಟನೆ

Suddi Udaya

ಮೊಗ್ರು ಗ್ರಾಮದ ಅಲೆಕ್ಕಿ ಮುಗೇರಡ್ಕ ದ ಶ್ರೀ ರಾಮ ಶಿಶುಮಂದಿರದಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ

Suddi Udaya

ಪಡ್ಡಂದಡ್ಕ ಮದರಸದಲ್ಲಿ ಗಣರಾಜ್ಯೋತ್ಸವ

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ: ಅಗ್ನಿಗುಳಿಗನ ಗಗ್ಗರ ಸೇವೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಸದಸ್ಯರಿಗೆ ತರಬೇತಿ ಕಾರ್ಯಗಾರ

Suddi Udaya
error: Content is protected !!