March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೇ 30: ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯ ನೂತನ “ಕೆ.ವಿ.ಪಿ.” ಕಾಂಪ್ಲೆಕ್ಸ್ ಶುಭಾರಂಭ

ಗುರುವಾಯನಕೆರೆ: ಕಳೆದ 12 ವರ್ಷಗಳಿಂದ ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಸಮಾಜದಲ್ಲಿ ಗುರುತಿಸಲ್ಪಟ ಸಂಸ್ಥೆಯಾಗಿ ಬೆಳೆದಿದೆ. ಇದೀಗ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕೆ.ವಿ.ಪಿ. ಕಾಂಪ್ಲೆಕ್ಸ್ (ಕುದ್ಕೋಳಿ ವಾಸು ಪೂಜಾರಿ ಕಾಂಪ್ಲೆಕ್ಸ್) ಇದರ ಶುಭಾರಂಭವು ಮೇ 30ರಂದು ಜರಗಲಿದೆ.

ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಲಿರುವರು. ವಾಣಿಜ್ಯ ಮಳಿಗೆಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್ ನೆರವೇರಿಸಲಿರುವರು.
ಮುಖ್ಯ ಅತಿಥಿಗಳಾಗಿ ಉಭಯ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಶೆಟ್ಟಿ ಉಪಸ್ಥಿತರಿರುವರು.


ಕೆ.ವಿ.ಪಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾರಂಭಿಸಲಿರುವ ಗುರುದೇವ ಎಲೆಕ್ಟ್ರಿಕಲ್ ನಲ್ಲಿ ಸ್ಯಾನಿಟರಿಗಳು, ಸಿಪಿ ಫಿಟ್ಟಿಂಗ್, ಗ್ಲೆ ಫಿಟ್ಟಿಂಗ್, ಆಶೀರ್ವಾದ್ ಸಿಪಿವಿಸಿ, ಯುಪಿವಿಸಿ, ಪಿವಿಸಿ ಪೈಪ್‌ಗಳು, ಆಶೀರ್ವಾದ್ ಕಾಲಮ್ ಪೈಪ್‌ಗಳು, ಎಚ್‌ಡಿಪಿಇ ಪೈಪ್‌ಗಳು, ಟ್ಯಾಂಕ್‌ಗಳು ಮತ್ತು ಎಲ್ಲಾ ರೀತಿಯ ವಿದ್ಯುತ್ ಸರಕುಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ತಾರಾ ಮತ್ತು ವಾಸು ಪೂಜಾರಿ ಕುದ್ಕೋಳಿ ಹಾಗೂ ನಿತೇಶ್ ಅವರು ತಿಳಿಸಿದ್ದಾರೆ.

Related posts

ಧರ್ಮಸ್ಥಳ: ಅಶೋಕನಗರ ನಿವಾಸಿ ನಾಟಿ ವೈದ್ಯೆ, ಶತಾಯುಷಿ ಶ್ರೀಮತಿ ನೊಕ್ಕೆ ನಿಧನ

Suddi Udaya

ಉಜಿರೆ: ಮಿತ್ರ ಮಹಿಳಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ವೇಣೂರು: ನವೀಕೃತ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಅಕ್ರಮ ಗೋಹತ್ಯೆ ಆರೋಪಿಗಳನ್ನು ಬಂಧಿಸಲು ಉಪ್ಪಿನಂಗಡಿ ವಿ.ಹಿ.ಪ. ಬಜರಂಗದಳದಿಂದ ಆಗ್ರಹ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

Suddi Udaya
error: Content is protected !!