31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಪದ್ಮುಂಜ: ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮೇ 31 ರಂದು ಸಂಘದ ವಠಾರದಲ್ಲಿ ಜರುಗಿತು .

ನೂತನ ವಿಸ್ತೃತ ಕಟ್ಟಡ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ನೆರವೇರಿಸಿದರು.
ನಂದಿನಿ ಸಭಾಭವನ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ದೀಪ ಪ್ರಜ್ಜಲಿಸಿ ಉದ್ಘಾಟಿಸಿದರು.

ಗೋದಾಮು ಕಟ್ಟಡದ ಉದ್ಘಾಟನೆಯನ್ನು ದ.ಕ.ಸ.ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹಾಗೂ ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಕಛೇರಿ ಉದ್ಘಾಟನೆಯನ್ನು ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಂ ರೈ, ಬಳಜ್ಜ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಮಾತನಾಡಿ ಸಣ್ಣ ಹಂತದಿಂದ ಬೆಳೆದು ಇಂದು ವಿಸ್ತೃತ ಕಟ್ಟದೊಂದಿಗೆ ಬೆಳೆದು ನಿಂತಿರುವ ಪದ್ಮುಂಜ ಹಾಲು ಉತ್ಪಾದಕರ ಸಹಕಾರ ಸಂಘ ಮಾದರಿದಾಯಕ. ಗ್ರಾಮೀಣ ಪ್ರದೇಶದ ಜನರ ಕಷ್ಟ ನೋವುಗಳಿಗೆ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪ್ಯಾಕ್ಸ್ ಗಳು ಸ್ಪಂದಿಸುತ್ತದೆ. ಬೆಳ್ತಂಗಡಿ ತಾಲೂಕಿನಿಂದ 1 ಲಕ್ಷ ಲೀಟರ್ ಹಾಲು ಉತ್ಪಾದಿಸಿ ಜಿಲ್ಲೆಯಲ್ಲಿ ನಂಬರ್ ಒನ್ ಆಗಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಪದ್ಮುಂಜ ಹಾಲು ಉ.ಸ.ಸಂಘ ಅಧ್ಯಕ್ಷ ಪುರುಷೋತ್ತಮ ಗೌಡ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ನಿರ್ದೇಶಕರುಗಳಾದ ಸವಿತಾ ಎನ್. ಶೆಟ್ಟಿ, ಪ್ರಭಾಕರ ಆರಂಬೋಡಿ, ಚಂದ್ರಶೇಖರ ರಾವ್, ಭರತ್ ನೆಕ್ರಾಣಿ, ವ್ಯವಸ್ಥಾಪಕ ಡಾ| ರವಿರಾಜ ಉಡುಪ, ಸಹಾಯಕ ನಿಬಂಧಕರು,ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ ಭಾಗವಹಿಸಿದ್ದರು.

ವಿಶೇಷ ಅಥಿತಿಗಳಾಗಿ ಪದ್ಮುಂಜ ಹಾಲು ಉ.ಸ.ಸಂಘದ ಸ್ಥಾಫಕಾಧ್ಯಕ್ಷ ಎಂ. ರಾಮಣ್ಣ ಮೇಲಾಂಟ ಮೊಗರೋಡಿ ಉಪಸ್ಥಿತರಿದ್ದರು.
ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ನಿಕಟಪೂರ್ವ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್, ಸಹಾಯಕ ವ್ಯವಸ್ಥಾಪಕ ಡಾ| ಜೀತೇಂದ್ರ ಪ್ರಸಾದ್, ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಶ್ರೀ.ಕ್ಷೇ.ಧ.ಗ್ರಾ.ಯೋ.ವಲಯ ಮೇಲ್ವಿಚಾರಕಿ ಶಿಲ್ಪಾ, ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಪಿ. ಕಾಮತ್ , ಮಂಗಳೂರು ದ.ಕ.ಸ.ಹಾಲು ಒಕ್ಕೂಟ ಉಪಾಧ್ಯಕ್ಷ ಉದಯ್ ಕೋಟ್ಯಾನ್ ಗೌರವ ಉಪಸ್ಥಿತರಿದ್ದರು.

ಪದ್ಮುಂಜ ಹಾಲು ಉ.ಪ.ಸಂಘದ ಸ್ಥಾಪಕಾಧ್ಯಕ್ಷ ಎಂ. ರಾಮಣ್ಣ ಮೇಲಾಂಟ ಮೊಗರೋಡಿ, ಎಮ್. ಉದಯ ಕುಮಾರ್ ಮೇಲಾಂಟ ಮೊಗರೋಡಿ, ಶಿವಪ್ರಸಾದ್ ಶೆಟ್ಟಿ ಮೊಗರೋಡಿ, ಧರ್ಣಪ್ಪ ಗೌಡ, ಬಾನಡ್ಕ, ಶ್ರೀಶ ಎ. ಅಂಡಿಲ, ಮಾಧವ ಗೌಡ ಉರುಂಬುತ್ತಿಮಾರ್, ಶ್ರೀಮತಿ ಮಮತಾ ಕೆ. ಅನಾಬೆ, ಬಿ. ರವಿರಾಜ್ ಹೆಗ್ಡೆ ಪೊಯ್ಯ, ಬಾಬು ಗೌಡ, ಮಡ್ಯಲಕಂಡ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಪದ್ಮುಂಜ ಹಾಲು ಉ.ಸ.ಸಂಘದ ಕಾರ್ಯದರ್ಶಿ ಎಂ. ಜಯರಾಮ ಶೆಟ್ಟಿ ಮಲೆಂಗಲ್ಲು ಇವರಿಗೆ ಬೀಳ್ಕೂಡುಗೆ ಕಾರ್ಯಕ್ರಮ ನಡೆಯಿತು.

Related posts

ಆ.15-16: ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಕ್ಷಕ ನಮನ 2025, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿವೇತನ ವಿತರಣೆ

Suddi Udaya

ಮೂಡುಕೋಡಿ ಕಳಸೊಟ್ಟು ಮನೆಯ ಚೆಲುವಮ್ಮ ನಿಧನ

Suddi Udaya

ಸಾವ್ಯ: ಆಕಸ್ಮಿಕವಾಗಿ ಕುಸಿದುಬಿದ್ದು ವ್ಯಕ್ತಿ ಸಾವು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಮುಂಬಯಿಯ ಶ್ರೀನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛ ಶನಿವಾರದ ಅಂಗವಾಗಿ ಸ್ವಚ್ಛತಾ ಶ್ರಮದಾನ ಹಾಗೂ ಮಾಹಿತಿ ಕಾರ್ಯಾಗಾರ:

Suddi Udaya

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ:ಆರೋಪಿಗೆ ನ್ಯಾಯಾಂಗ ಬಂಧನ

Suddi Udaya
error: Content is protected !!