27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಯಾಂತ್ರೀಕೃತ ಭತ್ತದ ನಾಟಿಗೆ ಚಾಲನೆ

ಬೆಳ್ತಂಗಡಿ: ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ. ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕು ,ರೋಟರಿ ಕ್ಲಬ್ ಬೆಳ್ತಂಗಡಿ, ಆನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ, ಹಳೆ ವಿದ್ಯಾರ್ಥಿ ಸಂಘ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿಯ ಸಹಯೋಗದೊಂದಿಗೆ ಹರಿದ್ವಾರ, ರೊ. ಬಿ.ಕೆ ಧನಂಜಯ್ ರಾವ್ ರವರ ಮನೆಯಲ್ಲಿ ಯಾಂತ್ರೀಕೃತ ಭತ್ತದ ನಾಟಿಗೆ ಆ.10 ರಂದು ಮನೋಜ್ ಮಿನೇಜಸ್ ಕೃಷಿ ಮತ್ತುCHSC ಪ್ರಾದೇಶಿಕ ನಿರ್ದೇಶಕರು ಕೇಂದ್ರ ಕಚೇರಿ ಧರ್ಮಸ್ಥಳ ಇವರು ಚಾಲನೆಯನ್ನು ನೀಡಿದರು.

ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ಯಾಂತ್ರೀಕೃತ ಭತ್ತದ ನಾಟಿ ಪದ್ಧತಿಯಿಂದ ರೈತರ ಸಮಯ, ಶ್ರಮ ಹಾಗೂ ಭತ್ತದ ಕೃಷಿಯಲ್ಲಿ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ,ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಭತ್ತದ ಕೃಷಿ ಯಂತ್ರೋಪಕರಣಗಳ ಬಳಕೆಗಳ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶವಾಗಿದೆ. ರೈತರಿಗೆ ಕೃಷಿ ಯಂತ್ರೋಪಕರಣಗಳ ಪ್ರಯೋಜನವನ್ನು ನೇರವಾಗಿ ತಲುಪಿಸುವ ಹಾಗೂ ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಭತ್ತದ ಕೃಷಿಯಲ್ಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ಕೂಲಿ ವೆಚ್ಚದ ಸಂದರ್ಭದಲ್ಲಿ ಯಾಂತ್ರೀಕೃತ ನಾಟಿ ರೈತರಿಗೆ ಉತ್ತಮ ಪರ್ಯಾಯವಾಗಲಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ರಾಜ್ಯಾದ್ಯಂತ ಭತ್ತ ಕೃಷಿಯನ್ನು ಉಳಿಸುವಲ್ಲಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹೊಸ ಚೈತನ್ಯ ನೀಡಿದ್ದು, ಭತ್ತ ಕೃಷಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಇಂದು ಭತ್ತದ ಕೃಷಿ ಉಳಿಯಲು ಯೋಜನೆಯ “ಯಂತ್ರಶ್ರೀ” ಕಾರ್ಯಕ್ರಮವೇ ಮುಖ್ಯ ಕಾರಣವಾಗಿದೆ. ಇಂದಿನ ಭವಿಷ್ಯವು ಮಕ್ಕಳ ಕೈಯಲ್ಲಿದೆ, ಪ್ರತಿ ಮಕ್ಕಳು ಕೂಡ ಮನೆಯಲ್ಲಿ ಇದ್ದಂತಹ ಭತ್ತ ಕೃಷಿಯನ್ನು ಉಳಿಸಿ ಬೆಳೆಸುವ ಕೃಷಿ ಮಾಡಬೇಕು ಎಂದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ರಮೇಶ್ ಕೆ.ಸಿ ಯವರು ಕೃಷಿ ಇಲಾಖೆಯ ಸವಲತ್ತಿನ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ರೋ.ಶ್ರೀಧರ್ ಕೆ.ವಿಯವರು ಇಂದು ರೋಟರಿ ಸಂಸ್ಥೆಯು ಭತ್ತದ ಗದ್ದೆಗಳಲ್ಲಿ ನೀರನ್ನು ಇಂಗಿಸಿದಾಗ ಅಂತರ್ಜಲವು ಹೆಚ್ಚಾಗುತ್ತದೆ, ಭತ್ತದ ಕೃಷಿಯಲ್ಲಿ ಮಾತ್ರ ಅಂತರ್ಜಲವನ್ನು ಹೆಚ್ಚು ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ತಾಲೂಕಿನ ಅತ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿ ,ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.

ಲಾಯಿಲ ಪ್ರದೇಶದ ಪಟ್ಟಣ ಭಾಗದಲ್ಲಿ ಇರುವಂತಹ ಗದ್ದೆಯನ್ನು ಉಳಿಸಿಕೊಂಡು ಇಂದು ಕೂಡ ಭತ್ತ ಕೃಷಿಯನ್ನು ಯಂತ್ರದ ಮೂಲಕ ಮಾಡಿಕೊಂಡು ಬರುತ್ತಿರುವ ಫ್ರಾನ್ಸಿಸ್ ಮಿರಂದ ಮತ್ತು ಜೂಲಿಯನ್ ಲೋಬೊ ಇವರನ್ನು ಸನ್ಮಾನಿಸಲಾಯಿತು.

ಶ್ರೇಷ್ಠ ಭತ್ತ ಕೃಷಿಕ ಪ್ರವೀಣ್ ಮಲೆಬೆಟ್ಟು ಹಾಗೂ ಹೊನ್ನಪ್ಪ ಪೂಜಾರಿ ಮಲೆಬೆಟ್ಟು ಇವರಿಗೆ ಸಸಿಮಡಿಯನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಬೆಳ್ತಂಗಡಿ ಅನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ರಾವ್, ರೋಟರಿ ಕ್ಲಬ್ ಕಾರ್ಯದರ್ಶಿ ರೊ.ರಾಘವೇಂದ್ರ ಪಿದಮಲೆ,
ಶಶಿಧರ ಡೊಂಗ್ರೆ, ಅಸಿಸ್ಟೆಂಟ್ ಗವರ್ನರ್ ಜೋನ್ lV ರೋಟರಿ ಜಿಲ್ಲೆ 3181, ಬೆಳ್ತಂಗಡಿ ಅನ್ಸ್ ಕ್ಲಬ್ ಕಾರ್ಯದರ್ಶಿ ಅಪರ್ಣ ವಾಟ್ವೆ , ಬೆಳ್ತಂಗಡಿ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್, ಕರ್ನೋಡಿ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಗಣೇಶ್, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ್, ಯೋಜನಾಧಿಕಾರಿ ಮೋಹನ್ CHSC ದಕ್ಷಿಣ ಕನ್ನಡ,ಕೃಷಿ ವಿಭಾಗ ಕೇಂದ್ರ ಕಚೇರಿ ಯೋಜನಾಧಿಕಾರಿ ಬಾಲಕೃಷ್ಣ ಉಪಸ್ಥಿತರಿದ್ದರು.

ಈ ಸಂದರ್ಭ, ರೋಟರಿ ಕ್ಲಬ್, ಆನ್ಸ್ ಕ್ಲಬ್ ನ ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಯಾಂತ್ರಿಕೃತ ಭತ್ತದ ಕೃಷಿಕರು, CHSC ಪ್ರಬಂಧಕರಾದ ಜಯಂತ್, ಮೇಲ್ವಿಚಾರಕಿ ಶ್ರೀಮತಿ ಮಲ್ಲಿಕ, ಬಿದಿರು ಸೊಸೈಟಿಯ ವಿಸ್ತರಣಾಧಿಕಾರಿ ಕುಮಾರ್ ನಾಥ್, ಶಾಲಾ ಮಕ್ಕಳು, ಶಿಕ್ಷಕರು ,ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ಬಿ.ಕೆ ಧನಂಜಯ್ ರಾವ್ ವಕೀಲರು ಬೆಳ್ತಂಗಡಿ ಸ್ವಾಗತಿಸಿ, ರಾಮ್ ಕುಮಾರ್ ಕೃಷಿ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಯಂತ್ರ ನಾಟಿ ಪ್ರಾತ್ಯಕ್ಷಿಕೆಯ ಮೂಲಕ ಗದ್ದೆಯನ್ನು ನಾಟಿ ಮಾಡಲಾಯಿತು. ಮಕ್ಕಳಿಗೆ ಯಂತ್ರ ನಾಟಿಯ ಬಗ್ಗೆ ಪರಿಚಯಿಸಲಾಯಿತು.

Related posts

ಕೂತ್ಲೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಉಷಾ ಆಯ್ಕೆ

Suddi Udaya

ಡಿ. 17: ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಸಭಾಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ

Suddi Udaya

ಇಂದಬೆಟ್ಟು: ದೇವನಾರಿ ನಿವಾಸಿ ರಝಾಕ್ ನಿಧನ

Suddi Udaya

ಪಿಯುಸಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ವಾಣಿ ವಿದ್ಯಾ ಪುರಸ್ಕಾರ-2026

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

Suddi Udaya
error: Content is protected !!