September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳದ ಭಕ್ತರಿಂದ ನೇತ್ರಾವತಿ ನದಿಗೆ ಬಾಗಿನ ಅರ್ಪಣೆ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಪರಮಭಕ್ತರಾದ ಹಾಸನದ ಎಚ್.ವೈ. ಸೋಮಶೇಖರ್ ಕುಟುಂಬ ಸಮೇತರಾಗಿ ಹಾಗೂ ತಮ್ಮ ಆತ್ಮೀಯ ಬಳಗದವರೊಂದಿಗೆ ಆ.10 ರಂದು ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ಸ್ನಾನಘಟ್ಟದಲ್ಲಿ ಶ್ರದ್ಧಾ-ಭಕ್ತಿಯಿಂದ ಬಾಗಿನ ಅರ್ಪಿಸಿದರು.

ಇವರು ಧರ್ಮಸ್ಥಳದ ಭಕ್ತರಾಗಿದ್ದು ವರ್ಷದಲ್ಲಿ ಅನೇಕ ಬಾರಿ ಧರ್ಮಸ್ಥಳಕ್ಕೆ  ಬಂದು ಸೇವೆ ಮಾಡುತ್ತಿದ್ದಾರೆ. ಹಾಸನ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಚಾಲಕಿ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ಕಾಂಚನಮಾಲ, ನವಜೀವನ ಸಮಿತಿಯ ಸದಸ್ಯರು, ಕಲಾವಿದರು ಹಾಗೂ ಶೌರ್ಯ ತಂಡದ ಮಹಿಳೆಯರು ಕೂಡಾ ಜೊತೆಯಲ್ಲಿದ್ದರು.
ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.

Related posts

ನಾಲ್ಕೂರು: ಹೃದಯಾಘಾತದಿಂದ ಮೆಲ್ವಿನ್ ನಿಧನ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವ ಭಕ್ತರ ಸಭೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣ ಹಾಗೂ ಬಂದೂಕು ಪತ್ತೆ ಪ್ರಕರಣ : ಇಂದು ಹೈಕೋರ್ಟ್ ನಲ್ಲಿ ವಿಚಾರಣೆ

Suddi Udaya

ಕಲ್ಮಂಜ: ಅಹಲ್ಯಾ ಯಾನೆ ರಮಾ ಚಿಪ್ಲೂಣ್ಕರ್ ನಿಧನ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಪ್ರಾಧ್ಯಾಪಕ ಈಶ್ವರ ಗೌಡ ಪಿ. ಅವರಿಗೆ ಪಿ. ಎಚ್.ಡಿ ಪದವಿ ಪ್ರದಾನ

Suddi Udaya
error: Content is protected !!