September 6, 2026
ಅಭಿನಂದನೆ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100%ಫಲಿತಾಂಶದೊಂದಿಗೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ನಾವೂರು :ಮೇ 31ರಂದು ಸರಕಾರಿ ಪ್ರೌಢಶಾಲೆ ನಾವೂರು ಇಲ್ಲಿ 2024/25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100%ಫಲಿತಾಂಶದೊಂದಿಗೆ ಉತ್ತಮ ಅಂಕ ಪಡೆದು ಶಾಲೆಗೆ, ಹೆತ್ತವರಿಗೆ ಮತ್ತು ಊರಿಗೆ ಕೀರ್ತಿ ತಂದವಿದ್ಯಾರ್ಥಿಗಳನ್ನುಅಭಿನಂದಿಸುವ ಕಾರ್ಯಕ್ರಮ ನಡೆಯಿತು


ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭ ಗೊಂಡಿತ್ತು ..ಮುಖ್ಯ ಶಿಕ್ಷಕರು ಶ್ರೀ ರಾಜೇಂದ್ರ ಭಟ್ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಾಧನೆಯ ಹಿಂದೆ ಕೈಜೋಡಿಸಿದ ಸರ್ವರನ್ನು ಅಭಿನಂದಿಸಿ ಮಕ್ಕಳಿಗೆ ಶುಭ ಹಾರೈಸಿದರು

.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಂದಾ ರವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು ಹಾಗು ನಾವೂರಿನ ವೈದ್ಯರು ಆಗಿರುವ ಶ್ರೀಯುತ ಡಾ. ಪ್ರದೀಪ್ , ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀ ಉಮೇಶ್ ಪ್ರಭು ಹಡೀಲ್, ಗ್ರಾಮಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರೂ ಪ್ರಸ್ತುತ ಸದಸ್ಯರು ಆಗಿರುವ ಶ್ರೀ ಗಣೇಶ್ ಗೌಡ,ಗ್ರಾಮ ಪಂಚಾಯತ್ ಪಿಡಿಒ ಶ್ರೀಮತಿ ಪೂರ್ಣಿಮಾ ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ವೇದಾವತಿ, ನಾವೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ,ಸರಕಾರಿ ಪ್ರೌಢಶಾಲೆ ನಾವೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಶ್ರೀ ಇಸ್ಮಾಯಿಲ್,ಗ್ರಾಮ ಪಂಚಾಯತ್ ನಾವೂರು ಇಲ್ಲಿನ ಸದಸ್ಯರು ಶ್ರೀ ಹಸೈನಾರ್,ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾವೂರು ಇಲ್ಲಿನ ಕಾರ್ಯದರ್ಶಿಗಳು ಶ್ರೀ ಧರ್ಣಪ್ಪ,ಹಿರಿಯ ಪೋಷಕರು ಶ್ರೀ ಧರ್ಣಪ್ಪ ಇವರು ಉಪಸ್ಥಿತರಿದ್ದರು.
ಶಾಲಾ ಹಂತದಲ್ಲಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದ ಭವಿಷ್,ಆಕಾಶ್ ಗೌಡ ಮತ್ತು ಅಕ್ಷಯ್ ಇವರನ್ನು ಗ್ರಾಮ ಪಂಚಾಯತ್ ವತಿಯಿಂದ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.500 ಹೆಚ್ಚು ಅಂಕ ಬಂದ ಮಕ್ಕಳನ್ನು ನಿವೃತ್ತ ಸಮನ್ವಯಾಧಿಕಾರಿ ಶ್ರೀ ಗಣೇಶ್ ಐತಾಳ್ ಅವರು ಮತ್ತು ನಾವೂರಿನ ಸಿಂಚನ ಟ್ರೇಡರ್ಸ್ ನ ಮಾಲಕರು ಶ್ರೀ ನಾರಾಯಣ ಪಿ ಇವರು ನೀಡಿದ ನಗದು ಮೊತ್ತ ಮತ್ತು ಸ್ಮರಣಿಕೆ ನೀಡಗೌರವಿಸಲಾಯಿತು.ಉಳಿದಂತೆ ಎಲ್ಲ ಮಕ್ಕಳನ್ನು ಸ್ಮರಣಿಕೆ ಹಾಗೂ ಹೂ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ನಿರ್ವಹಣೆ ಶ್ರೀಮತಿ ಪುಷ್ಪರವರು ನೆರವೇರಿಸಿದರು.ತದನಂತರ ವಿಷಯವಾರು ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಷಯವಾರು ಶಿಕ್ಷಕರು ನಗದು ಬಹುಮಾನ ನೀಡಿ ಗೌರವಿಸಿದರು. ಶ್ರೀ ಪ್ರದೀಪ್ ಸರ್ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಹಾಗು ಶಿಕ್ಷಕರ ಅವಿರತ ಪ್ರಯತ್ನವನ್ನು ಕೊಂಡಾಡಿ ಶುಭ ಹಾರೈಸಿದರು. ಎಸ್ ಡಿ ಎಂಸಿ ಉಪಾಧ್ಯಕ್ಷರು ಶ್ರೀ ಉಮೇಶ್ ಹಡೀಲ್ ರವರು ಮಕ್ಕಳಿಗೆ ಶುಭ ಹಾರೈಸಿದರು.ನಾವೂರು ಗ್ರಾಮಪಂಚಾಯತ್ ಪಿ ಡಿ ಒ ಶ್ರೀಮತಿ ಪೂರ್ಣಿಮಾ ರವರು ವಿಭಿನ್ನ ಸರ್ಕಾರಿ ಉದ್ಯೋಗಗಳು ಅವುಗಳನ್ನು ಪಡೆಯಲು ಯಾವ ರೀತಿ ಪೂರ್ವತಯಾರಿ ಮಾಡಬೇಕು ಎಂಬ ಅಂಶವನ್ನು ಮಕ್ಕಳಿಗೆ ತಿಳಿಸುತ್ತ ಶುಭ ಹಾರೈಸಿದರು.ಗ್ರಾಮಪಂಚಾಯತ್ ಸದಸ್ಯರು ಶ್ರೀ ಗಣೇಶ್ ಗೌಡ ರವರು ಮಕ್ಕಳ ಸಾಧನೆಯನ್ನು ಕೊಂಡಾಡುತ್ತ ಶಿಕ್ಷಕರ ಶ್ರಮವನ್ನು ಸ್ಮರಿಸಿದರು.ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೇದಾವತಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷೆ ಶ್ರೀಮತಿ ಸುನಂದಾ ರವರು ಶಿಕ್ಷಕರ ಹಾಗೂ ಮಕ್ಕಳ ಶ್ರಮ ಉತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದೆ ಎಂದು ಶುಭ ಹಾರೈಸಿದರು.ಕಾರ್ಯಕ್ರಮವನ್ನು ಶ್ರೀಮತಿ ಮೀನ ಎಂ ನಿರೂಪಿಸಿ , ವಿನೋದರವರು ಸ್ವಾಗತಿಸಿ.ಶ್ರೀಮತಿ ಭವ್ಯ ವಂದನಾರ್ಪಣೆ ಮಾಡಿದರು.

Related posts

ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಕೊಯ್ಲು- ಅಮೃತ ಮಹೋತ್ಸವ: ಕೆ.ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡ ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ: ಕೆ. ಮೋಹನ್ ಕುಮಾರ್ ದಂಪತಿಗಳಿಗೆ ಹಾಗೂ ಸುಮಂತ್ ಕುಮಾರ್ ಜೈನ್, ಹರೀಶ್ ಆರಿಕೋಡಿ, ರಕ್ಷಿತ್ ಶಿವರಾಂ ರವರುಗಳಿಗೆ ಸನ್ಮಾನ

Suddi Udaya

ಎಕೆಎಮ್ಎಸ್ಎಸ್ ಬೆಳ್ತಂಗಡಿ ‌ಘಟಕದ ಪ್ರಥಮ ವರ್ಷದ ಕುಟುಂಬ ಮಿಲನ ಕಾರ್ಯಕ್ರಮ

Suddi Udaya

ಲಾಯಿಲ ಗ್ರಾಮ‌ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಗೌರವಾರ್ಪಣೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯರಿಗೆ ಸನ್ಮಾನ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ

Suddi Udaya

ವಿಶ್ವವಿದ್ಯಾಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪ್ರಶಸ್ತಿ ಪ್ರದಾನ – ಸಮಾರೋಪ ಸಮಾರಂಭ

Suddi Udaya
error: Content is protected !!