25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

ಕೊಯ್ಯೂರು: ಆದೂರುಪೆರಾಲ್ ಶ್ರೀಕೃಷ್ಣ ಭಜನಾ ಮಂಡಳಿಯ ಸದಸ್ಯರು ಇತ್ತೀಚೆಗೆ ಪಾಂಬೇಲು ದೇವರಾಜ ಗೌಡರ ನೂತನ ಮನೆಯ ವಾಸ್ತು ಪೂಜೆಯ ಸಂದರ್ಭದಲ್ಲಿ ಭಜನಾ ಸೇವೆಯನ್ನು ನಡೆಸಿದರು.

ಭಜನಾ ಮಂಡಳಿಯ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಒಗ್ಗಟ್ಟು ಹಾಗೂ ವಹಿಸಿಕೊಂಡಂತಹ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿಗೆ ದೇವರಾಜ ಗೌಡ ಹಾಗೂ ಅವರ ಮನೆಯವರು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಸುಮಾರು ರೂ.24 ಸಾವಿರ ವೆಚ್ಚದ ಇನ್ವರ್ಟರ್ ಕೊಡುಗೆಯಾಗಿ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಪಾಂಬೇಲು ದೇವರಾಜ ಗೌಡರ ಮಗ ಡಾಕ್ಟರ್ ಕಾರ್ತಿಕ್ ಅವರ ಪತ್ನಿ ಶ್ರೀಮತಿ ನಿರೀಕ್ಷಾ, ಕಾರ್ತಿಕ್ ರವರ ಮಗ ವಿಹಾನ್‌ಕೃಷ್ಣ, ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್. ಭಜನಾ ಮಂದಿರದ ಉಪಾಧ್ಯಕ್ಷ ಸುಂದರ ಗೌಡ ಕಜೆಕೋಡಿ, ಕಾರ್ಯದರ್ಶಿ ಓಬಯ್ಯ ನಾಯ್ಕ, ಕೋಶಾಧಿಕಾರಿ ಬಾಲಕೃಷ್ಣ ಸಾಲ್ಯಾನ್, ಲೆಕ್ಕಪರಿಶೋಧಕರುಗಳಾದ ಲಿಂಗಪ್ಪ ಗೌಡ ಬೆರ್ಕೆ, ಹೇಮಂತ ಗೌಡ ದೇಂತ್ಯಾರುಬೊಟ್ಟು, ಭಜನಾ ಮಂಡಳಿಯ ಅರ್ಚಕ ಹೇಮಂತ ಗೌಡ ನಾಗನೊಡಿ, ಮಾಜಿ ಕಾರ್ಯದರ್ಶಿ ಮನೋಜ್ ಕುಮಾರ್ ಕಜೆ, ಮಾಜಿ ಜೊತೆ ಕಾರ್ಯದರ್ಶಿ ಜಿತೇಶ್ ಸಾಂತ್ಯೂಡಿ ಹಾಗೂ ವಸಂತ ನೇಕಾರ ಮುಂಡೆವು, ರಿತೇಶ್ ಬಜ, ಜನಾರ್ದನ ಉಮಿಯ, ಲತೀಶ ಆದೂರು ಪೇರಾಲ್, ನಿತಿನ್ ದೆಲೋಡಿ, ಕಮಲೇಶ್ ಸುರುಳಿ ಮತ್ತು ಭಜನಾ ಮಂಡಳಿಯ ಭಜಕ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ವನಮಹೋತ್ಸವ ಆಚರಣೆ

Suddi Udaya

ರಾಜ್ಯಮಟ್ಟದ ಬಾಲಕರ ಟೆಕ್ವಾಂಡೋ ಸ್ಪರ್ಧೆ: ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೀರ್ತೇಶ್ ತೃತೀಯ ಸ್ಥಾನ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

Suddi Udaya

ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬಕ್ಕೆ ಲೈಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ 9 ನೇ ತರಗತಿ ವಿದ್ಯಾರ್ಥಿ ಸಾವು

Suddi Udaya

ಲಾಯಿಲ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya
error: Content is protected !!