22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಡೆಂಗ್ಯೂ ಜಾಗೃತಿ- ಡಾ. ಕಲಾಮಧು ದಂಪತಿಗಳಿಗೆ ಸನ್ಮಾನ

ಮುಂಡಾಜೆ: ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ಮಾಸಿಕ ಸಭೆಯು ಜೂ.1ರಂದು ತಾಲೂಕು ನಿವೃತ್ತ ವೈದ್ಯಾಧಿಕಾರಿ ಡಾ| ಕಲಾಮಧು ಕಲ್ಯಾಣಿ ಶೆಟ್ಟಿ ಕಲ್ಮಂಜ ಇವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಡೆಂಗ್ಯೂ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಡಾ. ಕಲಾಮಧು ಉಪಯುಕ್ತವಾದ ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಕಲಾಮಧು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಕಲ್ಯಾಣಿ ಶೆಟ್ಟಿ ಇವರು ನೀಡಿದ ಆರೋಗ್ಯ ಹಾಗೂ ಸಾಮಾಜಿಕ ಸೇವೆಗಾಗಿ ದಂಪತಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ ಇವರು ಸನ್ಮಾನಿತ ದಂಪತಿಗಳ ಸೇವೆಯನ್ನು ಸ್ಮರಿಸಿದರು. ಸಂಚಾಲಕ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ, ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಉಪಾಧ್ಯಕ್ಷ ವಿಜಯಕುಮಾ‌ರ್ ರೈ ಶಾರದಾ ನಗರ, ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಪುಷ್ಪರಾಜ ರೈ ಕಲ್ಲಹಿತ್ತು, ಕೋಶಾಧಿಕಾರಿ ಮಧುಶೆಟ್ಟಿ ಹುರ್ತಾಜೆ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ನಾಗಂಡ ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿ ನವೀತ್‌ ಶೆಟ್ಟಿ ನಿರೂಪಿಸಿ, ವಂದಿಸಿದರು. ಗ್ರಾಮ ಸಮಿತಿಯ ಬಂಧುಗಳು ಹಾಗೂ ಡಾಕ್ಟರ್ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.

Related posts

ಕುವೆಟ್ಟು: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಶಂಕುಸ್ಥಾಪನೆ

Suddi Udaya

ಮರೋಡಿ:ಹರಂಬೆಟ್ಟು ಗುತ್ತು ಮನೆಯಲ್ಲಿ “ಧರ್ಮ ನೇಮೋತ್ಸವ”

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆ ಸುಮಾರು 25 ವಷ೯ಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ನಾರಾಯಣ ಪ್ರಭು ನಿಧನ

Suddi Udaya

ಕಾರಂದೂರು ಮನೆತನದ ಹಿರಿಯರು, ಪಡುಪಾಲ್ಟಾಲು ದಿ. ಪದ್ಮ ಪೂಜಾರಿಯವರ ಪತ್ನಿ ಶ್ರೀಮತಿ ಲಕ್ಷ್ಮೀ ನಿಧನ

Suddi Udaya

ವೇಣೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ; 2 ಸಾವಿರ ಗಿಡಗಳ ನಾಟಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಓದುವ ಸಪ್ತಾಹ

Suddi Udaya
error: Content is protected !!