September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ: ನೆಲ್ಯಾಡಿಯ ಹೃದಯಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ‘ಅಮ್ಮ ಕ್ಯಾಂಟೀನ್’ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ (38ವ) ಜೂ.2ರಂದು ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಪಾರೆಂಕಿ ಗ್ರಾಮದ ಮಡಂತ್ಯಾರ್ ಬಳಿಯ ದಡ್ಡು ನಿವಾಸಿಯಾಗಿರುವ ಗಿರೀಶ್, ಕಳೆದ 7 ವರ್ಷಗಳಿಂದ ನೆಲ್ಯಾಡಿಯಲ್ಲಿ ‘ಅಮ್ಮ ಕ್ಯಾಂಟೀನ್’ ನಡೆಸುತ್ತಿದ್ದರು. ಸರಳತೆ, ಶುದ್ಧ ಆಹಾರ, ಹಾಗೂ ನಿಜವಾದ ಸೇವಾಭಾವನೆಗಾಗಿ ಪ್ರಸಿದ್ಧಿ ಪಡೆದಿದ್ದ ಈ ಕ್ಯಾಂಟೀನ್ ಸ್ಥಳೀಯರ ವಿಶ್ವಾಸ ಗಳಿಸಿತ್ತು. ಗಿರೀಶ್ ಅವರು ಪತ್ನಿ ಮತ್ತು ಒಂದು ಮಗು ಜೊತೆಗೆ ನೆಲ್ಯಾಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶನಿವಾರ ದಂದು ಅವರು ತಮ್ಮ ಮೂಲ ಮನೆಗೆ ಹೋಗಿದ್ದು, ಅಲ್ಲಿ ಸೋಮವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಪತ್ನಿ, ಪುತ್ರ, ತಾಯಿ ಹಾಗೂ ಸಹೋದರ-ಸಹೋದರಿಯರು ಇದ್ದಾರೆ.

Related posts

ಏ.23: ಹುರುಂಬಿದೊಟ್ಟು ದೇವಾಲಯ ನಿರ್ಮಾಣದ ಶಿಲಾನ್ಯಾಸ-ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆ

Suddi Udaya

22 ವರ್ಷ ಭಾರತಮಾತೆಯ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಅಶೋಕ್ ಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಶಾಸಕ ಹರೀಶ್ ಪೂಂಜರಿಂದ ಮ್ಯಾರಥನ್ ಜನಸ್ಪಂದನ ಸಭೆ

Suddi Udaya

ಉಜಿರೆ: ಎಸ್.ಡಿ.ಎಂ ವಸತಿ ಪ.ಪೂ. ಕಾಲೇಜಿನ ಪ್ರಥಮ ಪ.ಪೂ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

Suddi Udaya
error: Content is protected !!