26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ

ಧರ್ಮಸ್ಥಳ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳು ಸಂಪೂರ್ಣ ಸಮವಸ್ತ್ರ ಧರಿಸಿಕೊಂಡು ಶಾಲೆಯ ಮುಂದೆ ಪರಿಸರ ಸಂರಕ್ಷಣೆಯ ಘೋಷಣೆಯನ್ನು ಕೂಗುತ್ತ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.

ಮಕ್ಕಳಿಗೆ ಪರಿಸರ ಗೀತೆಯನ್ನು ಹಾಡಿಸಲಾಯಿತು. ಶಾಲೆಯ ಆವರಣದಲ್ಲಿ ಇರುವಂತಹ ಹೂವಿನ ಗಿಡಗಳಿಗೆ ನೀರು ಗೊಬ್ಬರ ಹಾಕಿ ಸಲಹುವ ಸಂದೇಶ ನೀಡಿದರು. ಕೇವಲ ಗಿಡಗಳನ್ನು ನೆಟ್ಟರೆ ಸಾಲದು ಅದರಲ್ಲಿ ಇರುವ ಕಳೆಯನ್ನು ಕಿತ್ತು ಹೇಗೆ ಕಾಪಾಡಬೇಕು ಎಂದು ಕಬ್ ಮಾಸ್ಟರ್ ಅಮೃತ ವಿ ಶೆಟ್ಟಿ ಮಾಹಿತಿಯನ್ನು ನೀಡಿದರು.

ಫ್ಲಾಕ್ ಲಿಡರ್ ಸೌಮ್ಯ ಎಂ. ಸುಮಾರು ಹದಿನಾರು ಗಿಡಗಳನ್ನು ಕೊಠಡಿಯಲ್ಲಿ ಇಟ್ಟು ಹೆಸರು ಬರೆದು ನಂತರ ಮಕ್ಕಳು ಅದನ್ನು ವೀಕ್ಷಿಸಿ ನೆನಪಿನ ಶಕ್ತಿಯ ಸ್ಪರ್ಧೆಯನ್ನು ವ್ಯವಸ್ಥೆ ಮಾಡಿದರು. ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪರಿಮಳ ಎಂ.ವಿ. ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಬ್ ಮಾಸ್ಟರ್ ಹೇಮಾವತಿ ಜೈನ್ ಸಹಕರಿಸಿದರು.

Related posts

ಬೆಳಾಲು : ಮೂಕುತ್ತಿ ಮಜಲು ಹಾಗೂ ನಾಗಕಲ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ: ಶಾಸಕ ಹರೀಶ್ ಪೂಂಜ

Suddi Udaya

ಮದ್ದಡ್ಕ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ವಿ.ಪ. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಿಂದ ನಿವೃತ್ತ ಶಿಕ್ಷಕ ದಿ| ದೇವಪ್ಪ ಗೌಡರಿಗೆ ಸಂತಾಪ

Suddi Udaya

ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್ ಆರಂಭ ಆ.7 ರಿಂದ 16 ರವರೆಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ

Suddi Udaya

ಕೊಕ್ಕಡ ಸಂಗಮ್ ಯುವಕ ಮಂಡಲದ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!