September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಮಸ್ಯೆ

ಇಳಂತಿಲ: ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿತ : ಗ್ರಾ.ಪಂ. ಸದಸ್ಯ ತಿಮ್ಮಪ್ಪ ಗೌಡರ ನೇತೃತ್ವದಲ್ಲಿ ತೆರವು ಕಾರ್ಯ

ಇಳಂತಿಲ: ಜೂ.3ರಂದು ಇಳಂತಿಲ ಗ್ರಾಮದ ಹಾರಕೆರೆ ಎಂಬಲ್ಲಿ ವಿಪರೀತ ಮಳೆಗೆ ಮುಖ್ಯ ರಸ್ತೆಗೆ ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಸ್ತಗಿತಗೊಂಡಿತ್ತು.

ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ತಿಮ್ಮಪ್ಪ ಗೌಡರವರು ಸ್ಥಳಕ್ಕೆ ಭೇಟಿ ನೀಡಿ, ಹಿಟಾಚಿ ಮೂಲಕ ಸ್ಥಳದಲ್ಲಿದ್ದ ಮಣ್ಣು ತೆರವು ಕಾರ್ಯ ಹಾಗೂ ಆ ಸ್ಥಳದ ಡಾಮಾರು ರಸ್ತೆಯಲ್ಲಿ ಕೆಸರಿದ್ದ ಕಾರಣ ದ್ವಿಚಕ್ರ, ತ್ರಿಚಕ್ರ ವಾಹನಕ್ಕೆ ಅಡಚಣೆ ಉಂಟಾಗಿತ್ತು ಇದನ್ನು ಗಮನಿಸಿ ಟ್ಯಾಂಕರ್ ನಲ್ಲಿ ನೀರು ಹಾಯಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಹಕರಿದರು.

ಈ ಕಾರ್ಯಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.ವಿಪರ್ಯಾಸ ಎಂದರೆ ಹಾನಿ ಸಂಭವಿಸಿದ ಸ್ಥಳಕ್ಕೆ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಅಥವಾ ಸದಸ್ಯರಾಗಲಿ ಭೇಟಿ ನೀಡದೆ ಇರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

Related posts

ಮಡಂತ್ಯಾರು ಹಾರಬೆ ಕ್ರಾಸ್ ಬಳಿ ಬೈಕ್ ಗಳ ಮುಖಾಮುಖಿ ಡಿಕ್ಕಿ

Suddi Udaya

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಅಧರ್ಮಿಗಳ ಅಟ್ಟಹಾಸ ಅಂತ್ಯವಾಗಬೇಕು: ಅನಿಲ್ ಕುಮಾರ್ ಯು

Suddi Udaya

ತೆಂಕಕಾರಂದೂರು: ಕಟ್ಟೆಯ ಸಾರ್ವಜನಿಕ ಬಸ್ಸು ತಂಗುದಾಣ ಕುಸಿತ

Suddi Udaya

ಪರಿಶಿಷ್ಟ ಜಾತಿ-ಪಂಗಡಗಳ ವಿಶೇಷ ಗ್ರಾಮಸಭೆ ಬೆನ್ನಲ್ಲೇ ಸ್ಥಳಕ್ಕೆ ಬಂದ ಅಧಿಕಾರಿಗಳು – ನಡುಗುಡ್ಡೆ ಕಾಲುಸಂಕ ಪ್ರದೇಶ ಹಾಗೂ ರಸ್ತೆ ವಂಚಿತ ಬಜಕ್ರೆಸಾಲು ಪ್ರದೇಶದಲ್ಲಿ ಸಮಸ್ಯೆಗಳ ಪರಿಶೀಲನೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!