38.6 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ವರದಿ

ಶಿಬಾಜೆ: ರಸ್ತೆಗೆ ಅಡ್ಡಲಾಗಿ ಇಟ್ಟಿಗೆ ಇಟ್ಟ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕನಿಗೆ ಗಾಯ ಆರೋಪಿ ವಿರುದ್ಧ ಪ್ರಕರಣ ದಾಖಲು

ಶಿಬಾಜೆ: ರಸ್ತೆಗೆ ಅಡ್ಡಲಾಗಿ ಸಣ್ಣ ಇಟ್ಟಿಗೆಯನ್ನು ಇಟ್ಟು ಅದಕ್ಕೆ ಗೋಣಿಚೀಲ ಹಾಕಿ ಯಾವುದೇ ಸೂಚನಾ ಫಲಕ ಇಡದೆ ರಸ್ತೆಯನ್ನು ಮುಚ್ಚಿದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಶಿಬಾಜೆಯ ಅಭಿಲಾಷ್ ಗಾಯಗೊಂಡ ಪ್ರಕರಣ ಸಂಬಂಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕ ನೀಡಿದ ದೂರಿನ ಮೇರೆಗೆ ಜೂ. 2 ರಂದು ಆರೋಪಿ ಶಿಬಾಜೆಯ ಕುರುಂಬು ನಿವಾಸಿ ಧರ್ಣಪ್ಪ ಗೌಡ ವಿರುದ್ಧ (BNS) 2023(u/s -285,125(a)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ: ಜೂನ್ 1 ರಂದು ಚಾಲಕ ಶಿಬಾಜೆಯ ಅಭಿಲಾಷ್ ತನ್ನ ಆಟೋ ರಿಕ್ಷಾ (KA-70-8816) ದಲ್ಲಿ ಶಿಬಾಜೆ ಕಡೆಯಿಂದ ಅರಸಿನಮಕ್ಕಿ ಕಡೆಗೆ ಸುಮಾರು ರಾತ್ರಿ 8:49 ಗಂಟೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯದಲ್ಲಿ ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಕುರುಂಬು ಎಂಬಲ್ಲಿಗೆ ತಲುಪುತ್ತಿದಂತೆ ಅಭಿಲಾಷ್ ಚಲಾಯಿಸುತ್ತಿದ್ದ ರಸ್ತೆಯಲ್ಲಿ ಶಿಬಾಜೆ ಗ್ರಾಮದ ಕುರುಂಬು ನಿವಾಸಿ ಧರ್ಣಪ್ಪ ಗೌಡ ಎಂಬುವರು ರಸ್ತೆಯ ಮಧ್ಯಭಾಗದಲ್ಲಿ ಸಣ್ಣ ಇಟ್ಟಿಗೆಯನ್ನು ಇಟ್ಟು ಅದರ ಮೇಲೆ ಗೋಣಿಚೀಲವನ್ನು ಹಾಕಿ ಯಾವುದೇ ಸೂಚನಾ ಫಲಕ ಇಡದೇ ರಸ್ತೆಯನ್ನು ಮುಚ್ಚಿದ ಪರಿಣಾಮ ಅಭಿಲಾಷ್ ತನ್ನ ಬಾಬು ಆಟೋರಿಕ್ಷಾದ ಚಾಲನಾ ನಿಯಂತ್ರಣ ತಪ್ಪಿ ಒಮ್ಮೆಲೆ ಆಟೋರಿಕ್ಷಾ ಸಮೇತ ರಸ್ತೆಗೆ ಬಲಮಗ್ಗುಲಾಗಿ ಬಿದ್ದ ಕೂಡಲೇ ಅಭಿಲಾಷ್ ಅವರ ತಮ್ಮನಿಗೆ ದೂರವಾಣಿ ಕರೆ ಮೂಲಕ ಅಪಘಾತವಾದ ಬಗ್ಗೆ ತಿಳಿಸಿದ ತಕ್ಷಣ ಅವರ ತಮ್ಮ ಅನೀಷ್ ಎಂಬುವರು ಅಪಘಾತ ಸ್ಥಳಕ್ಕೆ ಬಂದು ಗಾಯಗೊಂಡ ಅಭಿಲಾಷ್ ನನ್ನು ಎತ್ತಿ ಉಪಚರಿಸಿ ಬಲಕಾಲಿನ ಮೊಣಕಾಲೆಗೆ ರಕ್ತಗಾಯ ಬಲಕಾಲಿನ ಮಣಿಗಂಟೆಗೆ ರಕ್ತಗಾಯ ಹಾಗೂ ಬಲ ಕಿಬ್ಯೂಟಿಗೆ ತರಚಿದ ಗಾಯವಾದವರನ್ನು ಚಿಕಿತ್ಸೆ ಬಗ್ಗೆ ಉಜಿರೆಯ SDM ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಮೊಗ್ರು: ಅಲೆಕ್ಕಿ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಇದರ ಬೆಳ್ಳಿಹಬ್ಬದ ಪ್ರಯುಕ್ತ ರಜತ ಮಹೋತ್ಸವ ಪ್ರತಿಬಿಂಬ ವಿಜ್ಞಾಪನ ಪತ್ರ ಬಿಡುಗಡೆ

Suddi Udaya

ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಜ್ಞಾಪನಾ ಶಕ್ತಿ ಪರೀಕ್ಷೆ ಸ್ಪರ್ಧೆ

Suddi Udaya

ಉಜಿರೆ: ಭಜಕೆರೆ ಗೊಬ್ಬು-2025 ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ರೂ.4.75 ಲಕ್ಷ ಸಾಲ ಪಡೆದು ವಂಚನೆ

Suddi Udaya

ಆರಂಬೋಡಿ: ಕುಂಟಾಲ ಪಲ್ಕೆ ಯುವತಿ ನಾಪತ್ತೆ

Suddi Udaya

ಬೆಳ್ತಂಗಡಿ : ಹಾ.ಉ.ಸ. ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಶಿಬಿರ

Suddi Udaya
error: Content is protected !!