25.7 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕಳೆಂಜ: “ಸೇವೆಯ ಹೊಸ ಹಾದಿಯಲ್ಲಿ ಹೊಸ ಹೆಜ್ಜೆ” ಎಂಬ ಘೋಷವಾಕ್ಯದೊಂದಿಗೆ, ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಸ್ಥೆಯ 2025-2028ನೇ ಅವಧಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಳೆಂಜ ಚರ್ಚ್ ಹಾಲ್‌ನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಸಂಸ್ಥೆಯ ಹಿರಿಯ ಸದಸ್ಯರಾದ ಅಗಸ್ಟೀನ್ ಟಿ.ಎ. ಅಧಿಕಾರ ಸ್ವೀಕರಿಸಿದರು. ಶಿಜೋ ಜೋಸೆಫ್ ಕಾರ್ಯದರ್ಶಿಯಾಗಿ, ಮ್ಯಾಥ್ಯೂ ವಿ.ಟಿ. ಉಪಾಧ್ಯಕ್ಷರಾಗಿ ಹಾಗೂ ರಂಜಿತ್ ಪಿ.ಎಸ್. ಕೋಶಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿದರು.

ಸಂಸ್ಥೆಯ ಮಾರ್ಗದರ್ಶಕ ಸೆಬಾಸ್ಟಿಯನ್ ಪಿ.ಟಿ. ಅವರನ್ನು ಗೌರವಾಧ್ಯಕ್ಷರಾಗಿ, ಮತ್ತು ಜೋಸೆಫ್ ಕೆ.ಡಿ. ಅವರನ್ನು ಗೌರವ ಸಲಹೆಗಾರರಾಗಿ ನೇಮಕ ಮಾಡಲಾಯಿತು.

ನೂತನ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ತೋಮಸ್.ಪಿ.ಡಿ, ಶಾಜಿ ತೋಮಸ್, ಮ್ಯಾಥ್ಯು ಕೆ.ಕೆ, ಜಿಬಿನ್ ಜೋಸೆಫ್, ಸೋನಿ ಪಿ.ಟಿ., ಟೋಮಿ ಕೆ.ಕೆ., ಜೋಸೆಫ್ ಎ.ಎ, ಶಿಂಡೋ ಜೇಕಬ್, ಜಯೇಶ್ ಕೆ.ಯಂ., ಜೋರ್ಜ್ ಟಿ.ಜಿ, ಸಂತೋಷ್ ಕೆ.ಇ, ತೋಮಸ್ ಕೆ.ಡಿ ಕಾರ್ಯನಿರ್ವಹಿಸಲಿದ್ದು ಹಳೆಯ ಪದಾಧಿಕಾರಿಗಳ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿ, ಹೊಸ ತಂಡದ ಪದಾಧಿಕಾರಿಗಳಿಗೆ ಸದಸ್ಯರು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ, ಸದಸ್ಯರು ಮತ್ತು ಸ್ಥಳೀಯ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚರ್ಚಿನ ಧರ್ಮಗುರು ರೇ. ಫಾ. ಸುನಿಲ್ ಪೂವತಿಂಗಲ್ ಮಾತನಾಡಿ ಸಂಸ್ಥೆಯ ಹೊಸ ತಂಡ ನೈಜ ಸೇವಾ ಕಾರ್ಯಗಳಲ್ಲಿ ಮುಂದುವರಿಯಲಿದ್ದು, ಸಮಾಜಮುಖಿ ಚಟುವಟಿಕೆಗಳಲ್ಲಿ ದಿಟ್ಟ ಹೆಜ್ಜೆ ಇಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ದನ್, ಮಾತನಾಡಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲಿವೆ ಎಂಬ ಆಶಾವಾದ ವ್ಯಕ್ತಪಡಿಸಿದರು.

ಪ್ರದೀಪ್ ಕೆ.ಜೆ. ಸ್ವಾಗತಿಸಿ, ಡಾರ್ವಿನ್ ಕಾರ್ಯಕ್ರಮ ನಿರೂಪಿಸಿ ಶಾಜಿ ತೋಮಸ್ ವಂದಿಸಿದರು.

Related posts

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ತನಿಖೆ ಪೂರ್ಣಗೊಂಡಿಲ್ಲ: ಪ್ರಣವ್ ಮೊಹಂತಿ

Suddi Udaya

ಕಳೆಂಜ : ಜನನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಸಭಾಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ವೇಣೂರು: ಮಹಾಮಸ್ತಕಾಭಿಷೇಕ ಸಂಪನ್ನ

Suddi Udaya

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ : ಎಸ್.ಡಿ ಎಂ ಕಾಲೇಜಿನ ಬಾಲಕರ ತಂಡ ರಾಜ್ಯ ಮಟಕ್ಕೆ ಆಯ್ಕೆ

Suddi Udaya

ಬಿಜೆಪಿ ಧರ್ಮಸ್ಥಳದ ಶಕ್ತಿಕೇಂದ್ರದ ಪ್ರಮುಖ್ ಹರ್ಷಿತ್ ಜೈನ್ ಹಾಗೂ ವಿಕ್ರಮ್ ಆಯ್ಕೆ

Suddi Udaya
error: Content is protected !!