24.2 C
ಪುತ್ತೂರು, ಬೆಳ್ತಂಗಡಿ
September 9, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮನ್‌ಶರ್ ಪಿ.ಯು. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಹಂಸಶ್ರೀ ಬಿ.ಆರ್. ಅಧಿಕಾರ ಸ್ವೀಕಾರ

ಮಡಂತ್ಯಾರು: ಗೇರುಕಟ್ಟೆಯಲ್ಲಿ ಬಹುಮಾನ್ಯ ಸಯ್ಯಿದ್ ಉಮರ್ ಅಸ್ಸಖಾಫ್ ಮನ್‌ಷ್ಯರ್ ತಂಗಳ್ ರವರ ನೇತೃತ್ವದ ಮನ್‌ಶರ್ ಪಿ.ಯು ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಹಂಸಶ್ರೀ ಬಿ.ಆರ್. ಅವರು ಅಧಿಕಾರ ಸ್ವೀಕರಿಸಿದರು.

ಇವರು ಬಂಟ್ವಾಳ ತಾಲೂಕು ಕಾವಲುಕಟ್ಟೆ ಎನ್.ಸಿ. ರೋಡ್ ನಿವಾಸಿ, ಸರಕಾರಿ ಪದವಿಪೂರ್ವ ಕಾಲೇಜು ಸಿದ್ದಕಟ್ಟೆಯ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿರುತ್ತಾರೆ. ಡಿ. ರಾಮಯ್ಯ ರವರ ಸುಪುತ್ರಿ. ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು 17 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದಾರೆ.

ಮೇ 31ರಂದು ಗೇರುಕಟ್ಟೆ ಮನ್‌ಶರ್ ಸಂಸ್ಥೆಯ ಅಧ್ಯಕ್ಷರು ಸಯ್ಯಿದ್ ಉಮರ್ ಅಸ್ಸಖಾಫ್ ಮನ್‌ಷ್ಯರ್ ತಂಗಳ್, ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ, ಪಿ.ಯು. ಕಾಲೇಜು ಉಪ ಪ್ರಾಂಶುಪಾಲರು ಮೊಹಮ್ಮದ್ ತೌಫೀಕ್ ಪಟ್ಟೆ ಹಾಗೂ ಉಪನ್ಯಾಸಕರ ಉಪಸ್ಥಿತಿಯಲ್ಲಿ ಅಧಿಕಾರ ಪತ್ರವನ್ನು ನೀಡಿ ಗೌರವಿಸಲಾಯಿತು.

Related posts

ಬೈಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ತರಗತಿ ಉದ್ಘಾಟನೆ

Suddi Udaya

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ಬ್ಯಾನರ್‌ನಲ್ಲಿ ಎಡವಟ್ಟು

Suddi Udaya

ಬೆಳ್ತಂಗಡಿ: ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಉಜಿರೆ ಭಾರತ್ ಆಟೋ ಕಾರ್‍ಸ್ ಮಾರುತಿ ಸುಝುಕಿ ಶೋರೂಮ್ ನಲ್ಲಿ ಡಾಜ್ಲಿಂಗ್ ನ್ಯೂ ಡಿಝೈರ್ ಕಾರು ಮಾರುಕಟ್ಟೆಗೆ

Suddi Udaya

ಜಿಪ್ಸಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಬಳಂಜ ಶಾಲಾ ಮುಖ್ಯೋಪಾಧ್ಯಾಯರಿಗೆ ಗಂಭೀರ ಗಾಯ

Suddi Udaya

ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

Suddi Udaya
error: Content is protected !!