ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾಳ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ

ನಾಳ: ನಾಳ ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತೇರಾ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ ಜೂ.3ರಂದು ಜರುಗಿತು.

ಸುಮಾರು ಅಂದಾಜು ೯೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸ ಪ್ರಸಿದ್ಧ ದೇವಸ್ಥಾನವು ನ್ಯಾಯತರ್ಪು, ಕಳಿಯ ಹಾಗೂ ಓಡಿಲ್ನಾಳ ಗ್ರಾಮದ ಭಕ್ತಾದಿಗಳು ಆರಾಧನೆ ಮೂಲಕ ವಿವಿಧ ಕಾರ್ಯಕ್ರಮಗಳು ನಡೆಯುತ್ತದೆ ಬರುತ್ತಿದೆ.

ಭತ್ತದ ಬೇಸಾಯ ಮರೆಮಾಚುತ್ತಿದ್ದು ಭಾದ್ರಪದ ಮಾಸದಲ್ಲಿ ದೇವಸ್ಥಾನಗಳಿಗೆ, ದೈವಸ್ಥಾನ ಹಾಗೂ ಹಿಂದುಗಳು ತನೆ ಕಟ್ಟುವುದು ಮತ್ತು ಹೊಸ ಆಕ್ಕಿ ಊಟ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ತೆನೆ ಅಗತ್ಯವಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಭತ್ತದ ಬೇಸಾಯ ಕೃಷಿ ಬೆಳೆಸುವುದು ಅನಿವಾರ್ಯ ವಾಗಿದೆ ಎಂದು ಹಿರಿಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ., ಸದಸ್ಯರಾದ ರಾಘವ ಹೆಚ್. ಹರೀಶ್ ಗೌಡ, ರೀತಾ ಚಂದ್ರಶೇಖರ್, ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಮಾಜಿ ಸದಸ್ಯ ರಾಜೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಂ., ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ಬಿ., ಶ್ರೀದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಮಮತಾ ಆಳ್ವ, ಪ್ರಬಂಧಕ ಗಿರೀಶ್ ಶೆಟ್ಟಿ, ಅಡ್ಡಕೊಡಂಗೆ, ಹಿರಿಯರಾದ ಪೂವಪ್ಪ ಶೆಟ್ಟಿ, ಉಮಾನಾಥ ಶೆಟ್ಡಿ ಕುಲ್ಲುಂಜ, ಉಮೇಶ್ ಶೆಟ್ಟಿ ಸಂಬೋಳ್ಯ, ಭಕ್ತಾದಿಗಳು ಮತ್ತಿತರರಿದ್ದರು.

ಕೃಷಿಕ ಕುಲ್ಲುಂಜ ನಿವಾಸಿ ಉಮನಾಥ ಶೆಟ್ಟಿ ಸ್ವತಃ ಭತ್ತದ ಬೀಜ ಬಿತ್ತನೆ ಮಾಡಿ ನೇಜಿ ತಯಾರಿಸಿ ಪ್ರತಿ ವರ್ಷದಂತೆ ದೇವಸ್ಥಾನಕ್ಕೆ ಉಚಿತವಾಗಿ ನೀಡಿದರು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವಾರ್ಷಿಕ ಸಭೆ

Suddi Udaya

ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ವತಿಯಿಂದ ನೃತ್ಯ ಭಜನೋತ್ಸವ

Suddi Udaya

ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಪ್ರಕ್ರಿಯೆಗೆ ಇಲಾಖೆಯಿಂದ ಕ್ರಮ: ತಾಲೂಕಿನಲ್ಲಿ 7,024 ಬಿಪಿಎಲ್ ಪಡಿತರ ಚೀಟಿಗಳ ಪರಿಶೀಲನೆ: 53 ಕುಟುಂಬಗಳ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಸಿರಿ ಸಿಬ್ಬಂದಿಗಳಿಂದ ಶುಭಾಶಯ

Suddi Udaya

ಪಡಂಗಡಿ ಹಾಗೂ ಕನ್ನಡಿಕಟ್ಟೆ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

Suddi Udaya
error: Content is protected !!