ಬೆಳ್ತಂಗಡಿ : ಹೋರಿಯನ್ನು ಹಿಂಸಾತ್ಮಕ ರೀತಿಯಲ್ಲಿ ಕೊರಳಿಗೆ ನೈಲಾನ್ ಹಗ್ಗ ಕಟ್ಟಿ ಎಳೆದುಕೊಂಡು ಬರುತ್ತಿದ್ದ ಇಬ್ಬರು ಹಾಗೂ ಹೋರಿಯನ್ನು ಕೊಟ್ಟ ಒಬ್ಬ ಸೇರಿ ಮೂವರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಜೂ.4 ರಂದು ರಾತ್ರಿ ಉಜಿರೆ ಓಡಲ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಒಂದು ಹೋರಿಯ ಕೊರಳಿಗೆ ನೈಲಾನ್ ಹಗ್ಗವನ್ನು ಕಟ್ಟಿ ಹಿಂಸಾತ್ಮಕವಾಗಿ ಎಳೆದುಕೊಂಡು ಬರುತ್ತಿರುವುದನ್ನು ಗಮನಿಸಿದ ಬೆಳ್ತಂಗಡಿ ಠಾಣಾ . ಪಿ.ಎಸ್. ಐ ಯಲ್ಲಪ್ಪ ಹೆಚ್ ಮಾದಾರ ಅವರು ಸದ್ರಿ ವ್ಯಕ್ತಿಗಳನ್ನು ವಿಚಾರಿಸಿದಾಗ ದೇವರಾಜ ಟಿ. ಹೆಚ್ ಮತ್ತು ತೇಜಸ್ ಎಂದು ತಿಳಿಸಿದ್ದರೆನ್ನಲಾಗಿದೆ. ಇವರಿಬ್ಬರಲ್ಲಿ ಹೋರಿಯನ್ನು ಕೊರಳಿಗೆ ನೈಲಾನ್ ಹಗ್ಗ ಕಟ್ಟೆ ಹಿಂಸಾತ್ಮಕವಾಗಿ ಎಳೆದು ಕೊಂಡು ಬರುತ್ತಿರುವ ಬಗ್ಗೆ ಮತ್ತು ನಿಗದಿತ ಪ್ರಾಧಿಕಾರಿಂದ ಪರವಾನಗಿ ಕೇಳಿದಾಗ , ಅಟೋ ಚಾಲಕ ರಿಯಾಜ್ ಎಂಬವರು ಹೋರಿಯನ್ನು ಟಿ.ಬಿ. ಕ್ರಾಸ್ ಹತ್ತಿರ ಬಿಡಲು ಹೇಳಿರುತ್ತಾರೆ ಎಂದು ತಿಳಿಸಿದ್ದರು.
ನಿಗದಿತ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಅಥವಾ ದಾಖಲಾತಿ ಪಡೆಯದೆ ಹೋರಿಯನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೊರಳಿಗೆ ನೈಲಾನ್ ಹಗ್ಗ ಕಟ್ಟಿ ಮಾಂಸಕ್ಕಾಗಿ ಎಳೆದುಕೊಂಡು ಹೋಗಲು ಹೋರಿಯನ್ನು ಕೊಟ್ಟ ಆರೋಪಿ ರಿಯಾಝ್ , ಹಾಗೂ ಅಕ್ರಮವಾಗಿ ಮಾಂಸಕ್ಕಾಗಿ ಹಿಂಸಾತ್ಮಕವಾಗಿ ಎಳೆದುಕೊಂಡು ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ದೇವರಾಜ ಟಿ. ಹೆಚ್ ಮತ್ತು ತೇಜಸ್ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆ ಅಕ್ರ ನಂ : 44/2025 ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಮತ್ತು ಕಲಂ:11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960ಯಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.











