26.2 C
ಪುತ್ತೂರು, ಬೆಳ್ತಂಗಡಿ
September 22, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆದ್ರಬೆಟ್ಟು ಮರಿಯಾಂಬಿಕ ಆಂ.ಮಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವದ ಆಚರಣೆ

ಬೆದ್ರಬೆಟ್ಟು: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಜೂ.5ರಂದು ನಡೆಯಿತು.

ಮುಖ್ಯ ಅತಿಥಿ ಅತಿ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಝಿ ಆಗಮಿಸಿ ಶಾಲಾ ಪ್ರಾರಂಭೋತ್ಸವವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶುಭ ಸಂದೇಶವನ್ನು ಹಾರೈಸಿದರು.

ಶಾಲಾ ಸಂಚಾಲಕ ವಂ.ಫಾ. ಸೆಬಾಸ್ಟಿಯನ್, ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ವಂ. ಸಿಸ್ಟರ್ ಎಲಿಝಬೆತ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಮುನ್ನುಡಿ ಇಟ್ಟರು. ಶಾಲೆಗೆ ದಾಖಲಾದ ಹೊಸ ವಿದ್ಯಾರ್ಥಿಗಳಿಗೆ ಪುಷ್ಪವನ್ನು ನೀಡುವುದರ ಮೂಲಕ ಸ್ವಾಗತಿಸಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ 2024-25ನೇ ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕವನ್ನು ಗಳಿಸಿರುವ ಯಶಸ್, ಪ್ರೇಕ್ಷ, ಫಾತಿಮತ್ ವಫಿಯ ಇವರನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ರಚನೆಯಾದ ಶಾಲಾ ಮಂತ್ರಿ ಮಂಡಲದ ನಾಯಕರುಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

ವಿದ್ಯಾರ್ಥಿಗಳು ಗಿಡ ನೆಟ್ಟು ಹಾಗೂ ಪರಿಸರ ಜಾಗೃತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವ ಮೂಲಕ ವನಮಹೋತ್ಸವವನ್ನು ಆಚರಿಸಿ ಈ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲ ವಂ.ಫಾ. ಮ್ಯಾಥ್ಯೂ ಪ್ರಾಸ್ತಾವಿಸಿ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಕು. ಮರಿಟ ಧನ್ಯವಾದವಿತ್ತರು.

Related posts

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ಹೊಸಂಗಡಿ : ಪ್ರಗತಿಪರ ಕೃಷಿಕ ರಾಮಪ್ಪ ಪೂಜಾರಿ ನಿಧನ

Suddi Udaya

ಸ್ವರ್ಣ ಜೇಸಿ ಸಪ್ತಾಹ: ಗೋಲ್ಡನ್ ಜೆಸಿಐ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧೆಯಲ್ಲಿ ರಿತ್ವಿಕ್ ಕೆ. ಪಿ ಬೆಳ್ತಂಗಡಿ ಪ್ರಥಮ ಸ್ಥಾನ

Suddi Udaya

ಜು.10: ಬೆಳ್ತಂಗಡಿಯಲ್ಲಿ ರೈತರಿಗೆ ವಿದ್ಯುತ್ ಸುರಕ್ಷತೆ ಕುರಿತು ತರಬೇತಿ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ

Suddi Udaya

ಪಟ್ರಮೆ: ಬರಮೇಲು ನಿವಾಸಿ ಪುಟ್ಟಣ್ಣ ಗೌಡ ನಿಧನ

Suddi Udaya
error: Content is protected !!