28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಭಾರತೀಯ ಭೂಸೇನೆ ತರಬೇತಿ ಮುಗಿಸಿ ಕಳೆಂಜಕ್ಕೆ ಆಗಮಿಸಿದ ಪುಷ್ಪರಾಜ್ ರವರಿಗೆ ಕೊಕ್ಕಡದಲ್ಲಿ ಸ್ವಾಗತ

ಕಳೆಂಜ: 2024ನೇ ಸಾಲಿನ ಅಗ್ನಿವೀರ್ ನೇಮಕಾತಿಯಲ್ಲಿ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದ ಪಿಲತ್ತಡಿ ಪುಪ್ಪರಾಜ್ ರವರು ಬೆಂಗಳೂರಿನಲ್ಲಿ ನಡೆದ 6 ತಿಂಗಳ ತರಬೇತಿ ಮುಗಿಸಿ ಇಂದು (ಜೂ.6) ಕಳೆಂಜಕ್ಕೆ ಆಗಮಿಸಿದ ಇವರನ್ನು ಕೊಕ್ಕಡ ರಿಕ್ಷಾ ನಿಲ್ದಾಣದ ಬಳಿ ಕಳೆಂಜ ಹಾಗೂ ಕೊಕ್ಕಡದ ಗ್ರಾಮಸ್ಥರು ಸ್ವಾಗತಿಸಿ, ಮೆರವಣಿಗೆಯ ಮೂಲಕ ಕಳೆಂಜಕ್ಕೆ ಬರಮಾಡಿಕೊಳ್ಳಲಾಯಿತು.

ಇವರು ಶೀಘ್ರದಲ್ಲೇ ಕಾರ್ಗಿಲ್‌ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಲಿದ್ದಾರೆ. ಎಸ್.ಎಸ್.ಎಲ್.ಸಿಯನ್ನು ಶಾಲೆತ್ತಡ್ಕ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ, ಪಿಯುಸಿ ಗುರುದೇವ ಕಾಲೇಜಿನಲ್ಲಿ ಹಾಗೂ ಪ್ರಸನ್ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರೀಷನ್ ಕೋರ್ಸ್ ಮುಗಿಸಿರುವ ಇವರು ಅ.೧೯ ರಂದು ಶಿವಮೊಗ್ಗದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದರು. ಇವರು ಕಳೆಂಜ ಪಿಲತ್ತಡಿ ವಿಶ್ವನಾಥ ಗೌಡ ಮತ್ತು ಸುಮಿತ್ರಾ ದಂಪತಿ ಪುತ್ರ.

Related posts

ಪೆರಿಂಜೆ : ಪಡ್ಡಾಯಿಬೆಟ್ಟು ನಿವಾಸಿ ಕೃಷಿಕ ವಿಠಲ ಹೆಗ್ಡೆ ನಿಧನ

Suddi Udaya

ನಡ ಸರಕಾರಿ ಪ್ರೌಢಶಾಲೆ ಶಾಲಾ ಪ್ರಾರಂಭೋತ್ಸವ

Suddi Udaya

ಮರೋಡಿ: ಸಾಕು ನಾಯಿಗಳಿಗೆ ಉಚಿತ ಹುಚ್ಚು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

Suddi Udaya

ಪೆರಾಡಿ : ಪಾಡಿ ನಿವಾಸಿ ವಸಂತ್ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ : ಮಹಿಳಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ನಮಿತಾ ಪೂಜಾರಿ ರವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಗಮಕ ವಾಚನ

Suddi Udaya
error: Content is protected !!