23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು: ಡಾ ಪ್ರಸನ್ನ ಕುಮಾರ್ ಐತಾಳ್

ಉಜಿರೆ: ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ೮ನೇ ತರಗತಿ ಹೊಸ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ದೀಪಪ್ರಜ್ವಲಿಸಿ, ಮಾತನಾಡಿ ವಿದ್ಯಾರ್ಥಿಗಳು ತಾಂತ್ರಿಕ ಜಗತ್ತಿಗೆ ಸಿಲುಕಿಕೊಂಡಿದ್ದಾರೆ, ಪೋಷಕರು ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಬೇಕು.

ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವುದು ಪ್ರಸ್ತುತ ಕಾಲಘಟ್ಟದಲ್ಲಿ ಅತಿ ಅಗತ್ಯ. ಈ ಶಿಕ್ಷಣವನ್ನು ರತ್ನಮಾನಸ ವಿದ್ಯಾರ್ಥಿ ನಿಲಯ ಹಲವಾರು ವರ್ಷಗಳಿಂದ ನೀಡುತ್ತ ಬಂದಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಅನೇಕ ಕ್ಷೇತ್ರದಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ, ಯಶಸ್ವಿಯಾಗಿರುವಂತಹ ನಿದರ್ಶನಗಳಿವೆ ಎಂದು ರತ್ನಮಾನಸದ ವಿದ್ಯಾರ್ಥಿಗಳು ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಸಂಸ್ಕೃತ ಉಪನ್ಯಾಸಕರಾದ ಡಾ/ ಪ್ರಸನ್ನ ಕುಮಾರ್ ಐತಾಳ್ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿ ಗುರುವಾಯನಕೆರೆ ಫ್ರೌಡಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ಮಾತನಾಡಿ ವ್ಯಕ್ತಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರಬೇಕು. ಹಲವಾರು ಮಂದಿಗೆ ಉದ್ಯೋಗವನ್ನು ಕೊಡುವಂತಹ ಶಕ್ತಿಗಳಾಗಬೇಕು, ಅಂಕವೇ ಪ್ರಾದಾನ್ಯತೆ ಅಲ್ಲ ಉತ್ತಮ ನಡವಳಿಕೆ ಅತಿ ಅಗತ್ಯ ಎಂದರು.

ಶಿಸ್ತು, ಸಮಯಪಾಲನೆ, ಸಂಸ್ಕಾರವನ್ನು ರತ್ನಮಾನಸ ಕಲಿಸುತ್ತದೆ. ಕಲಿಕೆಯಲ್ಲಿ ಶ್ರದ್ಧೆ, ವಿನಯ, ತಾಳ್ಮೆ ಬಹಳ ಪ್ರಾಮುಖ್ಯವಾದವು. ಮಕ್ಕಳ ಕಲಿಕೆ ಉತ್ತಮವಾಗಬೇಕಾದರೆ ಪೋಷಕರ ಪಾತ್ರ ಅಮೂಲ್ಯವಾದದ್ದು ಎಂದು ಎಸ್‌ಡಿಎಂ ಡಿಎಡ್ ಕಾಲೇಜಿನ ಉಪನ್ಯಾಸಕ ಮಂಜು ಆರ್. ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಆರೋಗ್ಯ ಕೇಂದ್ರದ ಹಿರಿಯ ಪರಿವೀಕ್ಷಕ ಸೋಮನಾಥ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಅಧ್ಯಕ್ಷತೆಯನ್ನು ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕ ಯತೀಶ್ ಕೆ. ಬಳಂಜ ವಹಿಸಿದ್ದರು.
೮ನೇ ತರಗತಿಯ ವಿದ್ಯಾರ್ಥಿಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ 10ನೇ ತರಗತಿಯ ವಿದ್ಯಾರ್ಥಿಗಳು ಆರತಿಯನ್ನು ಬೆಳಗಿ ಹಣೆಗೆ ತಿಲಕವನ್ನು ಇಟ್ಟು, ಬರಮಾಡಿಕೊಂಡರು.

ವೇದಿಕೆಯಲ್ಲಿ ನಿಲಯದ ಸಿಬ್ಬಂದಿಗಳಾದ ದೀಪಕ್ ಹಾಗೂ ಉದಯ ಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ನಿಶಿತ್ ಹಾಗೂ ರಾಕೇಶ್ ಡಿ ಆರ್ ಪ್ರಾರ್ಥಿಸಿ, ನಿಲಯದ ಅಧ್ಯಾಪಕರಾದ ರವಿಚಂದ್ರ ಸ್ವಾಗತಿಸಿದರು. ಉದಯರಾಜ್ ವಂದಿಸಿದರು. ವಿದ್ಯಾರ್ಥಿ ನಿಶಿತ್ ಕಾರ್ಯಕ್ರಮ ನಿರೂಪಿಸಿದರು.

Related posts

ನಿಟ್ಟಡೆ ಕುಂಭಶ್ರೀ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಚುನಾವಣೆಗೆ ವಿಘ್ನ : ಪೊಲೀಸ್ ಠಾಣೆಯ ಮೇಟ್ಟಿಲೇರಿದ ಮತದಾರರ ಪಟ್ಟಿಯ ವಿವಾದ

Suddi Udaya

ಡೆನ್ನಾನ ಡೆನ್ನನ – 2023 ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕ ಚಾಂಪಿಯನ್

Suddi Udaya

ಉರುವಾಲುಪದವು: ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

Suddi Udaya

ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಜೈನ್, ಕಾರ್ಯದರ್ಶಿಯಾಗಿ ಧನಂಜಯ ಗೌಡ ಆಯ್ಕೆ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಿಂದ ಈದ್ ಮಿಲಾದ್ ರ್‍ಯಾಲಿ

Suddi Udaya
error: Content is protected !!