32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿವರದಿ

ಜೂ.16: ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ”ಯು ಜೂ.೧೬ರಂದು ಆಯೋಜಿಸಲಾಗಿದೆ.
ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು. ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಜೂ.೧೬ರಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಆಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ.

ಅರ್ಜಿದಾರರು ನಮೂನೆ I & II ರಲ್ಲಿ ಭರ್ತಿ ಮಾಡಿ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಛೇರಿಗೆ ಅಥವಾ ನೇರವಾಗಿ ಮಾನ್ಯ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ/ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-೫೬೦೦೦೧ ರವರಿಗೆ ಸಲ್ಲಿಸುವುದು ಎಂದು ಮಂಗಳೂರು ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ), ಕುಮಾರಚಂದ್ರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್‌ ಸುವರ್ಣ ವರ್ಷಾಚರಣೆ; 50 ವಿಶಿಷ್ಟ ಕಾರ್ಯಕ್ರಮಗಳು, ಲಯನ್ಸ್ ಭವನ ನವೀಕರಣಕ್ಕೆ ನಿರ್ಧಾರ

Suddi Udaya

ಸೋಮಂತ್ತಡ್ಕದಲ್ಲಿ ಶ್ರೀಮತಿ ಪುಷ್ಪ ಮತ್ತು ಪುರುಷೋತ್ತಮ ಆಚಾರ್ಯ ಮಾಲಕತ್ವದ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್-ಫರ್ನಿಚರ್ಸ್ ಪ್ರಾರಂಭೋತ್ಸವ, ಅದೃಷ್ಟ ಯೋಜನೆ ಪ್ರಾರಂಭ

Suddi Udaya

ಬಂದಾರು ಗ್ರಾ.ಪಂ. ಅಧ್ಯಕ್ಷರಾಗಿ ದಿನೇಶ್ ಗೌಡ , ಉಪಾಧ್ಯಕ್ಷರಾಗಿ ಪುಷ್ಪಾವತಿ ಆಯ್ಕೆ

Suddi Udaya

ಸುಲ್ಕೇರಿ ಅ.ಹಿ. ಪ್ರಾ. ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya

ರೈತರ, ಯುವಜನರ, ಬಡವರ, ಮಧ್ಯಮ ವರ್ಗದವರ ವಿರೋಧಿ ಬಜೆಟ್: ರಕ್ಷಿತ್ ಶಿವರಾಂ

Suddi Udaya

ಶ್ರೀ ಸೌತಡ್ಕ ಕ್ಷೇತ್ರದಲ್ಲಿ ಇಜ್ಜಾವು ಮನೆಯವರಿಂದ ಸೇವಾರ್ಥ ಮೂಡಪ್ಪ ಸೇವೆ

Suddi Udaya
error: Content is protected !!