30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಲ್ಲಾಳರಾಯನ ದುರ್ಗಕ್ಕೆ ಟ್ರಕ್ಕಿಂಗ್ ಬಂದು ಕಾಡಿನ ಮಧ್ಯೆ ದಾರಿ ತಪ್ಪಿದ ಕಾಲೇಜು ವಿದ್ಯಾರ್ಥಿಗಳ ತಂಡ

ಬೆಳ್ತಂಗಡಿ: ಚಿತ್ರದುರ್ಗದಿಂದ ಬಂದು ಬೆಳ್ತಂಗಡಿ ಮೂಲಕ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ತೆರಳಿದ್ದ 10 ತಂಡ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ ಘಟನೆ ಜೂ. 9 ರಂದು ತಡರಾತ್ರಿಯಲ್ಲಿ ನಡೆದಿದೆ.

ಜೂ. 9 ರಂದು ಬೆಳಗ್ಗೆ, ಬೆಳ್ತಂಗಡಿಗೆ ಬಂದು ಅರಣ್ಯದ ಮೂಲಕ ಟ್ರೆಕ್ಕಿಂಗ್ ಆರಂಭಿಸಿದ ಐವರು ಯುವಕರು ಹಾಗೂ ಐದು ಮಂದಿ ಯುವತಿಯರ ತಂಡ ಚಾರಣಿಗರು ರಾತ್ರಿಯ ವೇಳೆ ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದು, ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ.

ನಂತರ ಕಾರ್ಯ ಪ್ರವೃತ್ತರಾದ ಚಿಕ್ಕಮಗಳೂರು ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಜೊತೆ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ತಡ ರಾತ್ರಿಯ ವೇಳೆ ಇವರನ್ನು ದಟ್ಟ ಅರಣ್ಯದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಬೆಳಗಿನ ಜಾವ ಇವರನ್ನು ಅರಣ್ಯದಿಂದ ಸುರಕ್ಷಿತವಾಗಿ ಹೊರತರಲಾಗಿದೆ.

Related posts

ಸಿಯೋನ್ ಆಶ್ರಮದಲ್ಲಿ ಹೊಸವರ್ಷ ಸಂಭ್ರಮ ಹಾಗೂ ಸ್ನೇಹಭೋಜನ ಕಾರ್ಯಕ್ರಮ

Suddi Udaya

ಉಜಿರೆ: ಅನುಗ್ರಹ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಚಾಲನೆ

Suddi Udaya

ಬೆಳ್ತಂಗಡಿಯಲ್ಲಿ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಲೀಡರ್ಸ್ ಮೀಟ್ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಕಾಲೇಜು ಉಜಿರೆ : ಬೃಹತ್ ರಕ್ತದಾನ ಶಿಬಿರ: ದಾಖಲೆಯ 180ಯುನಿಟ್ ರಕ್ತ ಸಂಗ್ರಹ

Suddi Udaya

ವೇಣೂರು ಸರ್ಕಾರಿ ಪ್ರೌಢಶಾಲೆ: OSAAT ಸಂಸ್ಥೆಯಿಂದ ರೂ.1.25 ಕೋಟಿ ಅನುದಾನದಲ್ಲಿ ಶಾಲಾ ಕೊಠಡಿಗೆ ಶಿಲಾನ್ಯಾಸ

Suddi Udaya
error: Content is protected !!