September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ ವತಿಯಿಂದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರಿಗೆ ರೂ.30 ಸಾವಿರ ಚೆಕ್ ಹಸ್ತಾಂತರ

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ (ರಿ.) ಬೆಳ್ತಂಗಡಿ ಇದರ ವತಿಯಿಂದ ಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಹತ್ಯಡ್ಕದ ಒಕ್ಕಲಿಗ ಗೌಡ ಸಮಾಜದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರು ಆಸ್ಪತ್ರೆಯ ಬಿಲ್‌ ಪಾವತಿಸಲು ಅಶಕ್ತರಾಗಿದ್ದು, ಈ ಬಗ್ಗೆ ಸೇವಾ ಟ್ರಸ್ಟ್‌ ಗೆ ಮನವಿ ಮಾಡಿದಾಗ ಆ ಕೂಡಲೇ ಸ್ಪಂದಿಸಿ, ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಂಗ್ರಹಿಸಿದ ಮೊತ್ತವಾದ ರೂ. 30 ಸಾವಿರ ಮೊತ್ತವನ್ನು ಟ್ರಸ್ಟಿನ ಹತ್ತನೇ ಸೇವಾ ಯೋಜನೆ ಅಡಿಯಲ್ಲಿ ಚಿಕಿತ್ಸೆಗೊಳಪಟ್ಟ ಸುಬ್ರಾಯ ಗೌಡ ಹತ್ಯಡ್ಕ ರವರ ಮನೆಗೆ ತೆರಳಿ ಟ್ರಸ್ಟಿನ ಸ್ಥಾಪಕ ಟ್ರಸ್ಟಿಗಳು ಟ್ರಸ್ಟಿನ ಚೆಕ್ಕನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸ್ಥಾಪಕ ಟ್ರಸ್ಟಿಗಳಾದ ರಂಜನ್ ಜಿ ಗೌಡ, ಶ್ರೀನಿವಾಸ್‌ ಗೌಡ ಬೆಳಾಲು, ಭರತ್ ಗೌಡ ಬಂಗಾಡಿ, ನವೀನ್ ಬಿ.ಕೆ ವಕೀಲರು, ಸೂರಜ್ ಗೌಡ ವಳಂಬ್ರ ಹಾಗೂ ಟ್ರಸ್ಟಿಗಳಾದ ಸುಂದರ ಗೌಡ ಉಡೈರೆ ಮತ್ತು ಧರ್ಮರಾಜ ಗೌಡ ಅಡ್ಕಡಿ ಉಪಸ್ಥಿತರಿದ್ದರು.

Related posts

ಸುಲ್ಕೇರಿಮೊಗ್ರು: ವಿಶಿಷ್ಟ ಸಾಧಕ ರಘು ಮಾಳಿಗೆ ನಿಧನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಲೆನ್ಸಿ ಪಿಂಟೊ, ಉಪಾಧ್ಯಕ್ಷರಾಗಿ ಫ್ರಾನ್ಸಿಸ್ ವಿ.ವಿ ಅವಿರೋಧ ಆಯ್ಕೆ

Suddi Udaya

ಗೇರುಕಟ್ಟೆ : ಕಳಿಯ ಗ್ರಾ.ಪಂ. ಮಹಿಳಾ ಗ್ರಾಮ ಸಭೆ

Suddi Udaya

ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲಿನ ಪೊಲೀಸ್ ಹಲ್ಲೆಗೆ ತಾಲೂಕು ವಕೀಲರ ಸಂಘದಿಂದ ಖಂಡನೆ: ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗೆ ಮನವಿ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಶಿಬಿರ

Suddi Udaya

ದಯಾ ವಿಶೇಷ ಮಕ್ಕಳ ಮುಂದಿನ ಭವಿಷ್ಯ ನಿರ್ಮಾಣಕ್ಕಾಗಿ ಡಿ.29 ರಂದು ಹೋಲಿ ರೆಡಿಮರ್ ಚರ್ಚ್ ವಠಾರದಲ್ಲಿ ದಯಾ ಫಿಯೆಸ್ತಾ-2024

Suddi Udaya
error: Content is protected !!