23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನವರದಿ

ಹೈನುಗಾರಿಕೆಯ ಸಾಧಕ ಪಿ.ನಾರಾಯಣ ರಾವ್ ಧರ್ಮಸ್ಥಳ ವಿಧಿವಶ

ಧರ್ಮಸ್ಥಳ: ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ವಿಶೇಷ ಸಾಧನೆಗೈದ ಧರ್ಮಸ್ಥಳ ಅಜೆಕುರಿ ನಿವಾಸಿ ಪಿ.ನಾರಾಯಣ ರಾವ್ (85 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ.12 ರಂದು ನಿಧನರಾದರು.

ಧರ್ಮಸ್ಥಳದಲ್ಲಿ ಕಳೆದ 40 ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಿ‌.ನಾರಾಯಣ ರಾವ್ ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಕೃಷಿ ಮತ್ತು ಹೈನುಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಇದರಲ್ಲಿ ವಿಶೇಷ ಸಾಧನೆ ಮಾಡಿದ್ದರು.

ಮೃತರು ಪತ್ನಿ ಕಮಲ, ಆರು ಮಕ್ಕಳಾದ ಕೃಷ್ಣ, ಸದಾಶಿವ, ಪ್ರಕಾಶ, ದಿನೇಶ್, ವಿಜಯ, ಹರಿಣಾಕ್ಷಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಮೃತರ ಮನೆಗೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷೆ ವಿಮಲ, ಸದಸ್ಯ ಹರ್ಷಿತ್ ಹಾಗೂ ಊರವರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Related posts

ಲಾಯಿಲ ಗ್ರಾ.ಪಂ. ವತಿಯಿಂದ ಕರ್ನೋಡಿ ಹಾಗೂ ಪಡ್ಲಾಡಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ವಿತರಣೆ

Suddi Udaya

ಜಿ.ಎಸ್.ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ: ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು – ಹರೀಶ್ ಪೂಂಜ

Suddi Udaya

ಧರ್ಮಸ್ಥಳ ಕಾಡಾನೆ ದಾಳಿ ಪ್ರದೇಶಕ್ಕೆ ಕೆ.ಎಸ್.ಎಂ.ಸಿ.ಎ ಅಧ್ಯಕ್ಷರ ತಂಡ ಭೇಟಿ

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಸಂವಿಧಾನ ಆಚರಣೆ

Suddi Udaya

ದಕ್ಷಿಣ ಭಾರತ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಎಸ್ ಡಿ ಎಂ ಪದವಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಭಾಗಿ

Suddi Udaya

ಭಾರತೀಯ ಸೇನೆಗೆ ಶಕ್ತಿ ತುಂಬಲು ಪ್ರಾರ್ಥನೆ

Suddi Udaya
error: Content is protected !!