23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್ ಡಿ ಎಂ ಎನ್ ಎಸ್ ಎಸ್ ಘಟಕಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ

ಉಜಿರೆ : ಇಲ್ಲಿನ ಶ್ರೀ. ಧ. ಮಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ.

ಗದ್ದೆ, ಭತ್ತ, ಅಕ್ಕಿಯ ಮಹತ್ವವನ್ನು ಯುವಜನತೆಗೆ ತೋರಿಸಿಕೊಡುವ ನಿಟ್ಟಿನಲ್ಲಿ “ ಯುವ ಸಿರಿ, ರೈತ ಭಾರತದ ಐಸಿರಿ ” ಎಂಬ ಹೆಸರಿನಡಿಯಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಜೊತೆಯಲ್ಲಿ ಶ್ರೀ. ಧ. ಮಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಮತ್ತು ಇನ್ನಿತರ ಸಂಘ ಸಂಸ್ಥೆಗಳು ಒಟ್ಟು ಸೇರಿ ಅ.24, 2024 ರಂದು ಅನಂತೋಡಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ 4.3೦ ಎಕರೆ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮವನ್ನ ನೆರವೇರಿಸಿತು.

ಏಕಕಾಲದಲ್ಲಿ ಇಷ್ಟು ಜನರೊಡಗೂಡಿ ನೆರವೇರಿಸಿದ ಈ ನಾಟಿ ಕಾರ್ಯಕ್ರಮವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ. ಈಗಾಗಲೇ ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುಮಾರು 54 ಪ್ರಶಸ್ತಿಗಳನ್ನು ಸ್ವೀಕರಿಸಿದ ಎಸ್ ಡಿ ಎಂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಕುಟಕ್ಕೆ ಇನ್ನೊಂದು ಪ್ರತಿಷ್ಠಿತ ಗರಿಮೆ ಸೇರ್ಪಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 200 ರಾ.ಸೇ.ಯೋ ಸ್ವಯಂ ಸೇವಕರು ಭಾಗಿಯಾಗಿದ್ದರು.

ಈ ಪ್ರತಿಷ್ಠಿತ ಪ್ರಶಸ್ತಿಯ ಫಲಕವನ್ನು ಕರ್ನಾಟಕ ರಾಜ್ಯದ ಎನ್ ಎನ್ ಎಸ್ ಕೋಶದ ಅಧಿಕಾರಿ ಪ್ರತಾಪ್ ಲಿಂಗಯ್ಯ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಬಿ.ಎ ಕುಮಾರ ಹೆಗ್ಡೆ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ. ಹೆಚ್, ಹಾಗೂ ಸ್ವಯಂ ಸೇವಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.

ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಕಾಲೇಜಿನ ಎನ್ ಎಸ್ ಎಸ್ ಘಟಕಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Related posts

ನಾವರ ಪ್ರಗತಿಬಂಧು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಬೆಳ್ತಂಗಡಿ ಗೃಹರಕ್ಷಕದಳ ಘಟಕಾಧಿಕಾರಿ ಜಯಾನಂದರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬೆಂಗಳೂರು ಭುವನೇಶ್ವರಿ ಕ್ಯಾಟರರ್ಸ್ ಜೆಬಿಆರ್ ಎಂಟರ್ ಪ್ರೈಶಸ್ ರವರಿಂದ ದೇವರಿಗೆ ವಿಶೇಷ ಹೂವಿನ ಅಲಂಕಾರ

Suddi Udaya

ಧರ್ಮಸ್ಥಳದಲ್ಲಿ “ರಾಜ್ಯಸಭೆಯಲ್ಲಿ ರಾಜರ್ಷಿ” ಕೃತಿ ಬಿಡುಗಡೆ

Suddi Udaya

ಕಿರುತೆರೆ ನಿರ್ದೇಶಕ ಸುಭಾಷ್ ಅರ್ವರವರಿಗೆ ಉತ್ತಮ ನಿರ್ದೇಶಕ ಅನುಬಂಧ ಆವಾರ್ಡ್-2023: ಮಂಗಳ ಗೌರಿ, ರಂಗನಾಯಕಿ, ಗೀತಾ, ಕೆಂಡಸಂಪಿಗೆ ಧಾರಾವಾಹಿ ನಿರ್ದೇಶನ

Suddi Udaya

ಬಿಗ್‌ಬಾಸ್ ಕನ್ನಡ ಸೀಸನ್ 11 ರ ಟ್ರೋಫಿ ಮುಡಿಗೇರಿಸಿಕೊಂಡ ಹಾವೇರಿಯ ಹಳ್ಳಿ ಹೈದ ಹನುಮಂತು

Suddi Udaya
error: Content is protected !!