September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜು: ಸ್ಟಾರ್ಟಅಪ್‌ಗಾಗಿ ಒಡಂಬಡಿಕೆ ಸಹಿ

ಉಜಿರೆ: ಸ್ಟಾರ್ಟಅಪ್ ಇನ್ಕುಬೇಶನ್ ಹಾಗೂ ಉದ್ಯಮಶೀಲತೆ ಉತ್ತೇಜಿಸುವ ಸಲುವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ನಕ್ಸ್ಟ್‌ಅಲೈನ್ ಮತ್ತು ಟೆಲೊಕ್ವೆನ್ಸ್ ಎಂಬ ಸ್ಟಾರ್ಟಪ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ.


“ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ನವೀನ ತಂತ್ರಜ್ಞಾನಗಳಲ್ಲಿ ಅನುಭವ ಪಡೆಯಲು, ಸ್ವ-ಉದ್ಯಮ ಕೈಗೊಳ್ಳಲು ಸಹಾಯವಾಗುವಂತೆ ತಂತ್ರಜ್ಞರಿಂದ ಮಾರ್ಗದರ್ಶನ ಹಾಗೂ ನೈಜ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಿಸಿರುವ ಈ ಅವಕಾಶವು ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿಯೂ ರೂಪಿಸಲು ಸಹಕಾರಿಯಾಗಿರುತ್ತದೆ” ಎಂದು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಟೆಲೊಕ್ವೆನ್ಸ್ ನ ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀಮತಿ ಅಕ್ಷತಾ ಜೈನ್, ಪ್ರವೀಣ್ ಗೋರೆ (ಟೆಲೊಕ್ವೆನ್ಸ್), ನಕ್ಸ್ಟ್‌ಅಲೈನ್ ನಿರ್ದೇಶಕ ವಿಜಯ್, ಡಿಲೈತ್‌ನಿರ್ದೇಶಕ ಅರುಣ್ ರಾಜಪುರೋಹಿತ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಮತ್ತು ಸ್ಟಾರ್ಟಪ್‌ಸ್ಕ್ವೇರ್ ಸಂಯೋಜಕರಾದ ಡಾ. ಬಸವ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಅಕ್ರಮ ಮರಳು ಸಾಗಾಟದ ಲಾರಿಗಳ ಮೇಲೆ ವೇಣೂರು ಪೊಲೀಸರ ದಾಳಿ

Suddi Udaya

ಮಾಲಾಡಿ: ಕಾರು ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರನಿಗೆ ಗಾಯ

Suddi Udaya

ಸುಲ್ಕೇರಿಮೊಗ್ರು: ಕೇದುಕುಲೆಂಜಿ ನಿವಾಸಿ ಅಪ್ಪಿ ನಿಧನ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಭ್ರಮದ ವಾರ್ಷಿಕೋತ್ಸವ

Suddi Udaya

ಮರೋಡಿ ಗ್ರಾಮ‌ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮಸಭೆ

Suddi Udaya

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ರೈತಬಂಧು ಆಹಾರೋಧ್ಯಮ ಮಾಲಕ ಶಿವಶಂಕರ್ ನಾಯಕ್ ರವರು ಭೇಟಿ

Suddi Udaya
error: Content is protected !!