September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ: ಸ್ಟಾರ್ ಲೈನ್ ಶಾಲಾ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2025-26 ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಇವರ ಮಾರ್ಗದರ್ಶನದಲ್ಲಿ ಶಾಲಾ ಸಹ ಶಿಕ್ಷಕರ ಸಹಯೋಗದೊಂದಿಗೆ ನಡೆಯಿತು.

ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕರುಗಳಿಗೆ ಮತ ಚಲಾಯಿಸಿದರು. ಅಂತಿಮವಾಗಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಮೊಹಮ್ಮದ್ ಶುಹೈಬ್, ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ಜಾಲಾಲುದ್ದಿನ್ ಮುನಾವರ್, ಶಿಕ್ಷಣ ಮಂತ್ರಿಯಾಗಿ ಮೊಹಮ್ಮದ್ ಮಾಝಿನ್, ಸಾಂಸ್ಕೃತಿಕ ಮಂತ್ರಿಯಾಗಿ ಶಾಕಿಬುಲ್ ಹಸನ್,ಆರೋಗ್ಯ ಮಂತ್ರಿಯಾಗಿ ಫಾತಿಮತ್ ಫಾಯಿಝ, ಶಿಸ್ತು ಮಂತ್ರಿಯಾಗಿ ಮೊಹಮ್ಮದ್ ಜಾಫರ್, ಪುಸ್ತಕಾಲಯದ ಮಂತ್ರಿಯಾಗಿ ಝೋಯ ಬಾನು, ಸ್ವಚ್ಛತಾ ಮಂತ್ರಿಯಾಗಿ ಅಫ್ರಿನ್ ಮರಿಯಂ ಆಯ್ಕೆಯಾದರು.

ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯು ಎಲ್ಲರ ಗಮನ ಸೆಳೆಯಿತು. ಶಾಲಾ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಅವರವರ ಕರ್ತವ್ಯಗಳನ್ನು ನೆನಪಿಸಿದರು ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ನಾಯಕರುಗಳು ಶಾಲೆಯ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.

Related posts

ಗಣೇಶ ಚತುರ್ಥಿಗೆ ದ.ಕ ಜಿಲ್ಲೆಯಲ್ಲಿ ಸೆ.19 ರಂದು ಸರ್ಕಾರಿ ರಜೆ : ಜಿಲ್ಲಾಧಿಕಾರಿ ಆದೇಶ

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಕೊಕ್ಕಡ ಸ.ಪ. ಪೂ. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ನ್ಯಾಯತರ್ಪು : ರಕ್ತೇಶ್ವರಿ ಪದವು ಬಳಿ ಗುಡ್ಡ ಕುಸಿತ: ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷರು , ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಅನುದಾನದಲ್ಲಿ ಹೊಸ್ತೋಟ ಅಂಗನವಾಡಿ ಕೇಂದ್ರಕ್ಕೆ ಸುಣ್ಣ ಬಣ್ಣ, ಗೋಡೆ ಬರಹ, ವರ್ಣ ರಂಜಿತ ಚಿತ್ರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಭೇಟಿ

Suddi Udaya
error: Content is protected !!