23.5 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ಎಕ್ಸೆಲ್ ಕಾಲೇಜಿನಲ್ಲಿ ದೃಷ್ಟಿ-2025 ಓರಿಯಂಟೇಶನ್ ತರಬೇತಿ ಕಾರ್ಯಾಗಾರ

  • ನಮ್ಮ ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ನಾವು ಹೇಳುವುದಕ್ಕಿಂತ ನಮ್ಮ ಫಲಿತಾಂಶವೇ ಹೇಳುತ್ತದೆ:ಸುಮಂತ್ ಕುಮಾರ್ ಜೈನ್
  • ಅಚಲವಾದ ಗುರಿ ನಮ್ಮಲ್ಲಿದ್ದರೆ ಗೆಲುವನ್ನು ಸುಲಭವಾಗಿ ಸಾಧಿಸಬಹುದು:ಪ್ರೊ.ಬಿವಿ ಸೂರ್ಯನಾರಾಯಣ

ಗುರುವಾಯನಕೆರೆ:ಹಣದ ಹಿಂದೆ ಹೋದವರು ಗೆದ್ದಿಲ್ಲ.ಗುರಿಯ ಹಿಂದೆ ಹೋದವರು ಗೆದ್ದಿದ್ದಾರೆ ಹಾಗೂ ಹಣವನ್ನೂ ಗಳಿಸಿದ್ದಾರೆ. ಹೀಗಾಗಿ ಅಚಲವಾದ ಗುರಿ ನಿಮ್ಮಲ್ಲಿದ್ದರೆ ಗೆಲುವನ್ನು ಸಾಧಿಸಬಹುದು, ಆಗ ತಾನಾಗಿಯೇ ಹಣ ಸಂಪಾದನೆ ಯಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿವಿ ಸೂರ್ಯನಾರಾಯಣ ಅವರು ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ‘ ದೃಷ್ಟಿ 2025 ‘ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಓರಿಯಂಟೇಶನ್ ಉದ್ಘಾಟಿಸಿ ಅವರು ಮಾತನಾಡಿದರು.

ಎಕ್ಸೆಲ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾಲೇಜಿನ ಶೈಕ್ಷಣಿಕ ಸಾಧನೆಯ ಬಗ್ಗೆ ನಾವು ಹೇಳುವುದಕ್ಕಿಂತ ನಮ್ಮ ಫಲಿತಾಂಶವೇ ಹೇಳುತ್ತದೆ. ವಿಜ್ಞಾನ ವಿಭಾಗದ ಎಲ್ಲಾ ಕೋಚಿಂಗ್ ನಮ್ಮಲ್ಲಿದೆ .ಬಳಸಿಕೊಳ್ಳುವ ಬುದ್ಧಿವಂತಿಕೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಎಂ ಅವರು ಪ್ರಾಸ್ತಾವಿಕ ಮಾತಿನಲ್ಲಿ, ‘ ಕನಸುಗಳು ನನಸಾಗ ಬೇಕಾದರೆ ಶ್ರಮ ಪಡುವುದನ್ನು ರೂಢಿಸಿ ಕೊಳ್ಳಬೇಕು. ನಿರಂತರವಾದ ಪರಿಶ್ರಮವೇ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ‌ ಎಂದು ಹೇಳಿ ಎಲ್ಲರನ್ನು ಸ್ವಾಗತಿಸಿದರು.

ಉಪನ್ಯಾಸಕರಾದ, ಡಾ. ಸತ್ಯ ನಾರಾಯಣ ಭಟ್ – ಸಿ ಇ ಟಿ ,ಪ್ರವೀಣ್ ಪಾಟೀಲ್ – ಜೆ ಇ ಇ,ಶ್ರೀನಿಧಿ ರಾಜ್ ಶೆಟ್ಟಿ – ನೀಟ್,ಜೋಸ್ಟಮ್ ಎ ಟಿ – ಎನ್ ಡಿ ಎ,ವರುಣ್ ದೇವ್ – ನಾಟಾ
ಹಾಗೂ ಪ್ರೊ. ರಾಜು ಬೆಳ್ಳುಂಡಗಿ – ಬಿ ಎಸ್ಸಿ ಅಗ್ರಿ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರಾದ ಗಾಯನ , ಅನುಷ್ಕಾ ಶೆಟ್ಟಿ, ಪ್ರೇಕ್ಷಾ ಜೈನ್, ಸುಭಿಕ್ಷಾ, ಗಾಯತ್ರಿ,ಕೆ, ಚೈತ್ರ ಎಂ.ಜಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಮೊಹಮ್ಮದ್ ಮನೀರ್ ನಿರೂಪಿಸಿದರು. ದಿಶಾ ವಂದಿಸಿದರು.

Related posts

ಬೆಳ್ತಂಗಡಿ ತಾಲೂಕಿನ ಎಲ್ಲಾ ಅಂಗನವಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ

Suddi Udaya

ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ವಾಣಿ ಕಾಲೇಜು: ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ

Suddi Udaya

ಪೆರಿಯಡ್ಕ ಶಾಲೆಗೆ ಮಂಗಳೂರು ಶಿಕ್ಷಾ ಸಾಥಿ ತಂಡದಿಂದ ಫ್ಯಾನ್ ಕೊಡುಗೆ

Suddi Udaya

ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಕಿಟ್ ವಿತರಣೆ

Suddi Udaya

ಕೆಪಿಎಸ್ ಪುಂಜಾಲಕಟ್ಟೆ, ಸೃಷ್ಟಿ ಟಿoಕರಿಂಗ್ ಪ್ರಯೋಗಾಲಯ ಉದ್ಘಾಟನೆ

Suddi Udaya
error: Content is protected !!