September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ :ಎಸ್ ಡಿ ಎಂ ಪ. ಪೂ. ಕಾಲೇಜಿನ ಎನ್ಎಸ್ಎಸ್  ಸ್ವಯಂ ಸೇವಕರಿಗೆ  ಪುನಃಶ್ಚೇತನ ತರಬೇತಿ ಕಾರ್ಯಾಗಾರ.

ಉಜಿರೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಡಿ ಎಂ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪರಾದ  ಡಾ. ಲಕ್ಷ್ಮೀನಾರಾಯಣರವರು ಎನ್ ಎಸ್ ಎಸ್ ನ ಧ್ಯೇಯ,ಉದ್ದೇಶ ಕಾರ್ಯಕ್ರಮ ಮುಂತಾದ ವಿಷಯಗಳ ಕುರಿತು ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ.ರವರು  ” ಎನ್ಎಸ್ಎಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒಂದು ಅವಕಾಶವಾಗಿದ್ದು, ಸ್ವಯಂ ಸೇವಕರಾಗಿ  ಇಲ್ಲಿ ತಮ್ಮನ್ನು ಸರಿಯಾಗಿ  ತೊಡಗಿಸಿಕೊಂಡಾಗ ನಿಜವಾದ ವ್ಯಕ್ತಿತ್ವ ಮೂಡಿಸಿಕೊಳ್ಳಲು ಸಾಧ್ಯ “ಎಂದು ಹೇಳಿದರು.

ವೇದಿಕೆಯಲ್ಲಿ ಎನ್ಎಸ್ಎಸ್ ನಿಕಟಪೂರ್ವ ಯೋಜನಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್ ಐತಾಳ್, ಯೋಜನಾಧಿಕಾರಿಗಳಾದ ವಿಶ್ವನಾಥ್  ಎಸ್., ಸಹಯೋಜನಾಧಿಕಾರಿ ಶೋಭಾ ಪಿ  ಉಪಸ್ಥಿತರಿದ್ದರು. 

ಸ್ವಯಂ ಸೇವಕಿ  ಮೌಲ್ಯ ಅತಿಥಿಗಳ ಪರಿಚಯಿಸಿದರು. ಸ್ವಯಂ ಸೇವಕರಾದ  ಸಂತೋಷ್ ನಿರೂಪಿಸಿ, ಸಂದೀಪ್ ಸ್ವಾಗತಿಸಿ ಸ್ವಯಂಸೇವಕಿ ಪಲ್ಲವಿ ವಂದಿಸಿದರು.

Related posts

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಗೆ ಅಂತಾರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರ ರವೀಂದ್ರ ಶೆಟ್ಟಿ ಭೇಟಿ

Suddi Udaya

ರಾಜ್ಯ ಸರ್ಕಾರಿ ನೌಕರರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿಜೈನ್ ರಿಗೆ ಸನ್ಮಾನ

Suddi Udaya

ಅಳದಂಗಡಿಯ ಅನುಷಾ ಎಲ್ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ

Suddi Udaya

ಬಂದಾರು: ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಮುಂಡೂರು ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ತೆಕ್ಕಾರು ಗ್ರಾ.ಪಂನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೂ.2 ಕೋಟಿ ಗೋಲ್ಮಾಲ್ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!