25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೂ.17: ಉಜಿರೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಥಾ ಕಾರ್ಯಕ್ರಮ

ಉಜಿರೆ :ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.17 ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು; ತಾಲೂಕು ಕಾನೂನು ಸೇವಾ ಸಮಿತಿ, ಬೆಳ್ತಂಗಡಿ; ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಪರಿಸರ ಜಾಥಾ ಬೆಳಿಗ್ಗೆ 9.00 ಗಂಟೆಗೆ ಸಿದ್ಧವನ ವೃತ್ತದಿಂದ ಉಜಿರೆ ಪೇಟೆಯವರೆಗೆ ನಡೆಯಲಿರುವುದು.


ಜಾಥಾಕ್ಕೆ ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ ಚಾಲನೆ ನೀಡಲಿರುವರು.

ನಂತರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಶಿವಾನಂದ ಕಳವೆ, ಪರಿಸರ ಬರಹಗಾರರು ನಡೆಸಲಿದ್ದು, ಅಧ್ಯಕ್ಷತೆಯನ್ನು ಎಸ್. ಡಿ ಎಮ್. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್,, ವಹಿಸಲಿರವರು,.

ಮುಖ್ಯ ಅತಿಥಿಗಳಾಗಿ ಕೀರ್ತಿ ಕುಮಾರ್ ಎಸ್. ಇ. ಒ, ಕೆ. ಎಸ್.ಪಿ.ಸಿ. ಬಿ, ಮಂಗಳೂರು, ತಹಶೀಲ್ದಾರರು ಪೃಥ್ವಿ ಸಾನಿಕಮ್, ಶಿಕ್ಷಣಾಧಿಕಾರಿ ವೆಂಕಟೇಶ್, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಭಾಗವಹಿಸಲಿರುವರು.

ಪರಿಸರ ಉಪನ್ಯಾಸವನ್ನು ಡಾ.ಹೆಚ್. ಲಕ್ಷ್ಮೀಕಾಂತ, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು, ನೀಡಲಿದ್ದಾರೆ ಎಂದು ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ

Suddi Udaya

8ನೇ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸೆ ದಿನದ ಪ್ರಯುಕ್ತ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜಿನಿಂದ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಮತ್ತು ಆರೋಗ್ಯ ಶಿಬಿರ

Suddi Udaya

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ನಾರಾಯಣ ಸ್ವಾಮಿ ಭೇಟಿ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಬ್ಯಾಂಕ್ ಆಫ್ ಬರೋಡದಿಂದ ಕಪಾಟು ಕೊಡುಗೆ

Suddi Udaya
error: Content is protected !!